‘ನಮಗೆ ಬೇಕಾದ ರೀತಿಯಲ್ಲಿ ಇರೋಕೆ ಬಿಡಿ’; ಮನವಿ ಮಾಡಿಕೊಂಡ ನಮ್ರತಾ ಗೌಡ
ನಮ್ರತಾ ಗೌಡ ಸಿಕ್ಕಾಪಟ್ಟೆ ಜಗಳ ಆಡುತ್ತಾರೆ ಎನ್ನುವ ಆರೋಪ ಇದೆ. ಅವರು ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಕಿರುಚಾಡಿದ್ದು ಇದೆ. ಇದಕ್ಕೆ ನಮ್ರತಾ ಉತ್ತರ ನೀಡಿದ್ದಾರೆ. ‘ನಮಗೆ ಸಮಾನ ಹಕ್ಕು ಬೇಕು’ ಎಂದು ಅವರು ವಾದ ಮುಂದಿಟ್ಟಿದ್ದಾರೆ. ನಮ್ರತಾ ಅವರು ಫಿನಾಲೆ ವೀಕ್ಗೂ ಹಿಂದಿನ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆದರು. ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಹಲವು ಶೋಗಳಲ್ಲಿ ಅವರು ಡ್ಯಾನ್ಸ್ ಮಾಡಿದ್ದಾರೆ.
ನಮ್ರತಾ ಗೌಡ (Namratha Gowda) ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಸಾಕಷ್ಟು ಚರ್ಚೆಯಲ್ಲಿ ಇದ್ದರು. ಅನೇಕರು ಅವರನ್ನು ಟ್ರೋಲ್ ಮಾಡಿದ್ದರು. ನಮ್ರತಾ ಸಿಕ್ಕಾಪಟ್ಟೆ ಜಗಳ ಆಡುತ್ತಾರೆ, ಅವರು ಸಿಕ್ಕಾಪಟ್ಟೆ ಕಿರುಚುತ್ತಾರೆ ಎನ್ನುವ ಆರೋಪವನ್ನು ಕೆಲವರು ಮಾಡಿದ್ದಿದೆ. ಇದಕ್ಕೆ ನಮ್ರತಾ ಉತ್ತರ ನೀಡಿದ್ದಾರೆ. ‘ನಾವು ಮಹಿಳೆಯರು. ನಮಗೂ ಭಾವನೆಗಳು ಇರುತ್ತವೆ. ಪುರುಷ ಸ್ಪರ್ಧಿಗೆ ಸರಿಯಾಗಿ ನಿಂತು ಫೈಟ್ ಮಾಡಿದ್ದೇವೆ. ಹೀಗಿರುವಾಗ ಮಹಿಳೆಯರು ಯಾವಾಗಲೂ ಸೈಲೆಂಟ್ ಆಗಿರಬೇಕು ಎಂದು ಏಕೆ ನಿರೀಕ್ಷಿಸುತ್ತೀರಾ? ನಾವು ಸಮಾನರು ಎಂದು ಸಾಬೀತುಪಡಿಸಿದ ಬಳಿಕ ನಮಗೆ ಬೇಕಾದ ರೀತಿಯಲ್ಲಿ ಇರೋಕೆ ಬಿಡಿ’ ಎಂದು ನಮ್ರತಾ ಗೌಡ ಕೇಳಿಕೊಂಡಿದ್ದಾರೆ. ನಮ್ರತಾ ಅವರು ಫಿನಾಲೆ ವೀಕ್ಗೂ ಹಿಂದಿನ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆದರು. ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಹಲವು ಶೋಗಳಲ್ಲಿ ಅವರು ಡ್ಯಾನ್ಸ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

