ರಾತ್ರಿ ಮಾಂಸಾಹಾರ ಸೇವಿಸಿದವನು ಬೆಳಗ್ಗೆ ದೇವಸ್ಥಾನಕ್ಕೆ ಹೋಗಬಹುದಾದರೆ ಬೆಳಗ್ಗೆ ತಿಂದವನು ಸಾಯಂಕಾಲ ಹೋಗಬಾರದೆ? ಸಿದ್ದರಾಮಯ್ಯ

Edited By:

Updated on: Aug 22, 2022 | 11:16 AM

ರಾತ್ರಿ ಮಾಂಸಾಹಾರ ಸೇವಿಸಿ ಬೆಳಗ್ಗೆ ದೇವಸ್ಥಾನಕ್ಕೆ ಹೋಗಬಹುದಂತೆ, ಬೆಳಗ್ಗೆ ತಿಂದವನು ಸಾಯಂಕಾಲ ಗುಡಿಗೆ ಹೋಗಬಾರದಂತೆ-ಕೇವಲ ಇಂಥ ಮೌಢ್ಯಗಳನ್ನು ಮಾತ್ರ ಬಿಜೆಪಿ ಜನರ ಮನಸ್ಸಿನಲ್ಲಿ ಬಿತ್ತುತ್ತಿದೆ ಎಂದು ಅವರು ಕಿಡಿಕಾರಿದರು.

ಮಡಿಕೇರಿಯಲ್ಲಿ (Madikeri) ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದನ್ನು ಸಮರ್ಥಿಸಿಕೊಂಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ಅದರಲ್ಲಿ ತಪ್ಪೆಲ್ಲಿಂದ ಬಂತು, ದೇವರು ಮಾಂಸಾಹಾರ (non-veg food) ಸೇವಿಸಬಾರದು ಅಂತ ಹೇಳಿದ್ದಾನಾ ಅಂತ ಪ್ರಶ್ನಿಸಿದ್ದಾರೆ. ರಾತ್ರಿ ಮಾಂಸಾಹಾರ ಸೇವಿಸಿ ಬೆಳಗ್ಗೆ ದೇವಸ್ಥಾನಕ್ಕೆ ಹೋಗಬಹುದಂತೆ, ಬೆಳಗ್ಗೆ ತಿಂದವನು ಸಾಯಂಕಾಲ ಗುಡಿಗೆ ಹೋಗಬಾರದಂತೆ-ಕೇವಲ ಇಂಥ ಮೌಢ್ಯಗಳನ್ನು ಮಾತ್ರ ಬಿಜೆಪಿ ಜನರ ಮನಸ್ಸಿನಲ್ಲಿ ಬಿತ್ತುತ್ತಿದೆ ಎಂದು ಅವರು ಕಿಡಿಕಾರಿದರು.