ವಿಜಯಪುರ: ಬಿಜೆಪಿ ಮುಖಂಡರ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಅವರ ಕಚೇರಿ ಗೋಡೆಗಳ ಮೇಲೆ ಟಿಪ್ಪು ಸುಲ್ತಾನ್ ಫೋಟೋ ಅಂಟಿಸುತ್ತೇವೆ: ಕಾಂಗ್ರೆಸ್ ಮುಖಂಡ
ಬಸವರಾಜ ಹೂಗಾರ ಮತ್ತು ಇತರ ಸದಸ್ಯರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡು ಜೈಲಿಗಟ್ಟದಿದ್ದರೆ ಬಿಜೆಪಿ ಕಚೇರಿಯ ಗೋಡೆಗೆ ಟಿಪ್ಪು ಸುಲ್ತಾನ್ ಭಾವಚಿತ್ರಗಳನ್ನು ಅಂಟಿಸಲಾಗುವುದೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಅಲಗೂರ ಹೇಳಿದ್ದಾರೆ.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿ ಗೋಡೆಗೆ ವೀರ ಸಾವರ್ಕರ್ (Veer Savarkar) ಅವರ ಫೋಟೋವನ್ನು ಬಿಜೆಪಿ ಕಾರ್ಯಕರ್ತರು ಅಂಟಿಸಿದ್ದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸಿದೆ. ಫೋಟೋ ಅಂಟಿಸಿದ್ದು ನಾವೇ ಎಂದು ಹೇಳಿರುವ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಬಸವರಾಜ ಹೂಗಾರ ಮತ್ತು ಇತರ ಸದಸ್ಯರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡು ಜೈಲಿಗಟ್ಟದಿದ್ದರೆ ಬಿಜೆಪಿ ಕಚೇರಿಯ ಗೋಡೆಗೆ ಟಿಪ್ಪು ಸುಲ್ತಾನ್ (Tipu Sultan) ಭಾವಚಿತ್ರಗಳನ್ನು ಅಂಟಿಸಲಾಗುವುದೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಅಲಗೂರ (Raju Algur) ಹೇಳಿದ್ದಾರೆ.
Latest Videos