ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್ ಸ್ಟೆಪ್ ಹಾಕಿದ ಡೊನಾಲ್ಡ್ ಟ್ರಂಪ್
ಅಮೇರಿಕದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್, ವಾಷಿಂಗ್ಟನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ನಿ ಮೆಲಾನಿಯಾ ಜೊತೆ ಕೇಕ್ ಕತ್ತರಿಸಿ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟ್ರಂಪ್ ಎಲ್ವಿಸ್ ಹಾಡಿಗೆ ನೃತ್ಯ ಮಾಡಿದ್ದು, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಅವರ ಪತ್ನಿ ಕೂಡ ವೇದಿಕೆ ಹಂಚಿಕೊಂಡಿದ್ದಾರೆ.
ಅಮೆರಿಕದಲ್ಲಿ ಎರಡನೇ ಬಾರಿಗೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಟ್ರಂಪ್ ಪದಗ್ರಹಣದ ಬಳಿಕ ವಾಷಿಂಗ್ಟನ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪತ್ನಿ ಮೆಲಾನಿಯಾ ಜತೆ ಭಾಗವಹಿಸಿದ್ದಾರೆ. ಈ ವೇಳೆ ವೇದಿಕೆಗೆ ಆಗಮಿಸಿದ ಡೊನಾಲ್ಡ್ ಟ್ರಂಪ್ ನೆರೆದಿದ್ದ ಸಾವಿರಾರು ಜನರ ಮುಂದೆ ಕೇಕ್ ಕತ್ತರಿಸುತ್ತಾ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಟ್ರಂಪ್ ಸಂಭ್ರಮದಿಂದ ಕುಣಿದು ಕುಪ್ಪಳಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಕೈಯಲ್ಲಿ ಮಿಲಿಟರಿ ಖಡ್ಗ ಹಿಡಿದು ಕೇಕ್ ಕತ್ತರಿಸಲು ಸಜ್ಜಾಗಿರುವ ಟ್ರಂಪ್ ಎಲ್ವಿಸ್ ಅವರ ಅಮೇರಿಕನ್ ಟ್ರೈಲಾಜಿ ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಜೊತೆಗೆ ಪ್ರಥಮ ಮಹಿಳೆ ಮೆನಾಲಿಯಾ ಟ್ರಂಪ್ ಕೂಡ ಸಂಗೀತಕ್ಕೆ ಕುಣಿದು ಕುಪ್ಪಳಿಸಿದ್ದಾರೆ. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಅವರ ಪತ್ನಿ ಉಷಾ ವಾನ್ಸ್ ಕೂಡ ವೇದಿಕೆ ಹಂಚಿಕೊಂಡಿದ್ದಾರೆ.
Published on: Jan 21, 2025 12:32 PM
Latest Videos