ಬೆಳಗಾವಿ ಕಾಂಗ್ರೆಸ್ ಅಧಿವೇಶನ: ವಿಮಾನ ನಿಲ್ದಾಣದಲ್ಲಿ ಪೊಲೀಸರೊಂದಿಗೆ ಕಾಂಗ್ರೆಸ್ ಪುಢಾರಿಗಳ ಜಟಾಪಟಿ

ಬೆಳಗಾವಿ ಕಾಂಗ್ರೆಸ್ ಅಧಿವೇಶನ: ವಿಮಾನ ನಿಲ್ದಾಣದಲ್ಲಿ ಪೊಲೀಸರೊಂದಿಗೆ ಕಾಂಗ್ರೆಸ್ ಪುಢಾರಿಗಳ ಜಟಾಪಟಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 21, 2025 | 11:32 AM

ಕರ್ತವ್ಯನಿರತ ಪೊಲೀಸರ ಮೇಲೆ ಪುಢಾರಿಗಳು ರೇಗಾಡುವುದು, ಬಯ್ಯುವುದು, ಗತ್ತು ಪ್ರದರ್ಶಿಸುವುದು ಹೊಸದೇನಲ್ಲ. ಆಡಳಿತ ಪಕ್ಷದ ಸಣ್ಣಪುಟ್ಟ ನಾಯಕರು ಹಾಗೆ ಮಾಡೋದುಂಟು. ತಮ್ಮ ಪಕ್ಷ ಸರ್ಕಾರ ನಡೆಸುತ್ತಿರುವುದರಿಂದ ತಾವೂ ಸರ್ಕಾರದ ಭಾಗವೆಂದು ಅವರು ಭಾವಿಸುತ್ತಾರೆ. ಪೊಲೀಸರಿಗೆ ಸಚಿವರ ಮತ್ತು ಗಣ್ಯರ ಭದ್ರತೆ ಮುಖ್ಯವಾಗಿರುತ್ತದೆ, ಅದನ್ನು ಛೋಟಾ ಲೀಡರ್​​​ಗಳು ಅರ್ಥಮಾಡಿಕೊಳ್ಳಬೇಕು.

ಬೆಳಗಾವಿ: ನಗರದಲ್ಲಿ ಇಂದು ನಡೆಯುತ್ತಿರುವ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಬರುವ ಕಾಂಗ್ರೆಸ್ ಮುಖಂಡರನ್ನು ಸ್ವಾಗತಿಸಲು ಒಂದು ಕಮಿಟಿಯನ್ನು ರಚಿಸಲಾಗಿದೆ. ಕಮಿಟಿಯ ಸದಸ್ಯರು ಮತ್ತು ಪೊಲೀಸರ ನಡುವೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತಿನ ಜಟಾಪಟಿ ನಡೆಯಿತು. ಬೆಂಗಳೂರು ನಿಂದ ಬೆಳಗಾವಿಗೆ ಆಗಮಿಸಿದ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಮತ್ತು ಇತರ ನಾಯಕರನ್ನು ಕಮಿಟಿಯ ಸದಸ್ಯರು ಸ್ವಾಗತಿಸಲು ಮುಂದಾದಾಗ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ