ತೆಲಂಗಾಣದ ದೇವಾಲಯದಲ್ಲಿ ಅಭಿಮಾನಿಗಳಿಂದ ಡೊನಾಲ್ಡ್ ಟ್ರಂಪ್‌ಗೆ ಹಾಲಿನ ಅಭಿಷೇಕ!
ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಭಾರತದಲ್ಲೂ ಡೊನಾಲ್ಡ್ ಟ್ರಂಪ್ ಗೆಲುವಿಗೆ ಸಂಭ್ರಮಾಚರಣೆ ನಡೆದಿದೆ. ತೆಲಂಗಾಣದಲ್ಲಿ ಟ್ರಂಪ್ಗೆಂದೇ ಅಭಿಮಾನಿಯೊಬ್ಬರು ದೇವಾಲಯವನ್ನು ಕಟ್ಟಿಸಿದ್ದಾರೆ ಎಂಬ ವಿಷಯ ಬಹಳ ಜನರಿಗೆ ಗೊತ್ತಿಲ್ಲ. ಈ ದೇವಸ್ಥಾನದಲ್ಲಿ ಟ್ರಂಪ್ ಪುತ್ಥಳಿಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಾಚರಣೆ ಮಾಡಲಾಗಿದೆ.
ಹೈದರಾಬಾದ್: ಭಾರತದ ತೆಲಂಗಾಣದ ಸಣ್ಣ ಹಳ್ಳಿಯೊಂದರಲ್ಲಿ, ಡೊನಾಲ್ಡ್ ಟ್ರಂಪ್ ಅವರ ನಿರೀಕ್ಷಿತ ಗೆಲುವಿಗೆ ಸಂಭ್ರಮ ಮನೆಮಾಡಿದೆ. ಯುಎಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ 2019ರಲ್ಲಿ ದಿವಂಗತ ಬುಸ್ಸಾ ಕೃಷ್ಣ ಎಂಬುವವರು ದೇವಸ್ಥಾನವೊಂದನ್ನು ಕಟ್ಟಿದ್ದರು. ನಂತರ ಅವರು ಟ್ರಂಪ್ ಕೃಷ್ಣ ಎಂದೇ ಜನಪ್ರಿಯರಾದರು. ಟ್ರಂಪ್‌ಗೆ ಸಮರ್ಪಿತವಾದ ಈ ದೇಗುಲವು ಇದೀಗ ಮತ್ತೊಮ್ಮೆ ಗಮನ ಸೆಳೆಯುತ್ತಿದೆ. ಜನಗಾಂವ್ ಜಿಲ್ಲೆಯ ಕೊನ್ನೆ ಗ್ರಾಮದ ರೈತ ಬುಸ್ಸಾ ಕೃಷ್ಣ ಅವರು 201 ರಲ್ಲಿ ಟ್ರಂಪ್ ಅವರಿಂದ ಸ್ಫೂರ್ತಿ ಪಡೆದಿದ್ದರು. ಅವರು 2018ರಲ್ಲಿ ತಮ್ಮ ಮನೆಯ ಒಂದು ಭಾಗವನ್ನು ದೇವಾಲಯವನ್ನಾಗಿ ಮಾಡಿದರು. ಅಮೇರಿಕಾ ಅಧ್ಯಕ್ಷರ ಮೇಲಿನ ಕೃಷ್ಣನ ಅಭಿಮಾನ ಎಷ್ಟರಮಟ್ಟಿಗೆ ಬೆಳೆಯಿತೆಂದರೆ, 2019ರಲ್ಲಿ ಅವರು ತಮ್ಮ ಮನೆಯ ಹೊರಗೆ 6 ಅಡಿಯ ಟ್ರಂಪ್‌ರ ಪ್ರತಿಮೆಯನ್ನು ಸ್ಥಾಪಿಸಲು ಸುಮಾರು 2 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದರು. ಆ ಪ್ರತಿಮೆಗೆ ಆಗಾಗ ಹಾಲಿನ ಅಭಿಷೇಕ ಮಾಡುತ್ತಿದ್ದರು. ಇದೀಗ ಮತ್ತೆ ಆ ಪುತ್ಥಳಿಗೆ ಹಾಲಿನ ಅಭಿಷೇಕ ಮಾಡಿ ಟ್ರಂಪ್ ವಿಜಯವನ್ನು ಸಂಭ್ರಮಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್

