ಆರ್ಸಿಬಿ ಗೆಲ್ಲುತ್ತೆ ಅಂತ ಈಗ್ಲೇ ಹೇಳ್ಬೇಡಿ! ಅನಿಲ್ ಕುಂಬ್ಳೆ ಹೀಗೆಂದಿದ್ದೇಕೆ ನೋಡಿ
ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿಯಾಗಿ ನೇಮಕಗೊಂಡಿರುವ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಐಪಿಎಲ್ ಫೈನಲ್ ಆಡುತ್ತಿರುವ ಆರ್ಸಿಬಿಗೆ ಶುಭ ಹಾರೈಸಿದ್ದಾರೆ. ಆದರೆ, ಆರ್ಸಿಬಿ ಗೆಲ್ಲುತ್ತದೆ ಎಂದು ಈಗಲೇ ಹೇಳಬೇಡಿ. ಆದರೆ, ಗೆಲ್ಲಬೇಕು ಎಂಬುದು ನಮ್ಮ ಹೃದಯದ ಮಾತು, ಹಾರೈಕೆ ಎಂದರು. ವಿಡಿಯೋ ಇಲ್ಲಿದೆ ನೋಡಿ.
ಬೆಂಗಳೂರು, ಜೂನ್ 3: ಐಪಿಎಲ್ ಫೈನಲ್ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ, ಇದೇ ತಂಡದ ಮಾಜಿ ನಾಯಕರೂ ಆಗಿರುವ ಅನಿಲ್ ಕುಂಬ್ಳೆ ಶುಭ ಹಾರೈಸಿದ್ದಾರೆ. ಆದರೆ, ಆರ್ಸಿಬಿ ಗೆಲ್ಲುತ್ತೆ ಎಂದು ಈಗಲೇ ಹೇಳಬೇಡಿ ಎಂದು ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆರ್ಸಿಬಿ ಗೆಲ್ಲಬೇಕು ಎಂಬುದು ನಮ್ಮ ಹೃದಯದ ಮಾತು. ಹಾಗೆಯೇ ಆಗಲಿ ಎಂದು ಹಾರೈಸೋಣ ಎಂದರು. ಪಂಜಾಬ್ ತಂಡದಲ್ಲೂ ನಾನು ಆಡಿದ್ದೆ. ಆರ್ಸಿಬಿಯಲ್ಲೂ ಆಡಿದ್ದೆ. ಎರಡೂ ತಂಡಗಳು ಬೆಸ್ಟ್. ಉತ್ತಮ ಪ್ರದರ್ಶನ ನೀಡಿದ ತಂಡಗಳೇ ಫೈನಲ್ ಪ್ರವೇಶಿಸಿವೆ. ಆರ್ಸಿಬಿ ಗೆಲ್ಲಲಿ ಎಂಬುದು ಹಾರೈಕೆ ಎಂದು ಹೇಳಿದರು.