ಆರ್ಸಿಬಿ ಕಪ್ ಗೆಲ್ಲೋ ಭರವಸೆಯಲ್ಲಿ ಹೋಳಿಗೆ ವಿತರಣೆ!
18 ವರ್ಷಗಳ ಬಳಿಕ ಆರ್ಸಿಬಿ ಐಪಿಎಲ್ ಕಪ್ ಗೆಲ್ಲುವ ಸಂಭ್ರಮದಲ್ಲಿ ಒಂದಡೆ ಅಭಿಮಾನಿಗಳು ಇದ್ದರೆ, ಮತ್ತೊಂದೆಡೆ ದೇವನಹಳ್ಳಿಯ ವೆಜ್ ಲ್ಯಾಂಡ್ ಹೋಟೆಲ್ ಮಾಲೀಕ ನಂಜುಂಡಿ ತಮ್ಮ ಗ್ರಾಹಕರಿಗೆ ಹೋಳಿಗೆ ಊಟ ಹಾಕಿಸಲು ಮುಂದಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಹೊರವಲಯದ ವೆಜ್ ಲ್ಯಾಂಡ್ ರೆಸ್ಟೋರೆಂಟ್ನಲ್ಲಿ ಇಂದು ಮಧ್ಯಾಹ್ನದಿಂದ ರಾತ್ರಿ ಪಂದ್ಯ ಮುಗಿಯುವ ವರೆಗೆ ಹೋಳಿಗೆ ವಿತರಣೆ ನಡೆಯಲಿದೆ.
ದೇವನಹಳ್ಳಿ, ಜೂನ್ 3: ಐಪಿಎಲ್ ಟೂರ್ನಿಯ ಫೈನಲ್ ಪ್ರವೇಶಿಸಿರುವ ಆರ್ಸಿಬಿ ತಂಡ ಕಪ್ ಗೆಲ್ಲುವ ಭರವಸೆಯೊಂದಿಗೆ ದೇವನಹಳ್ಳಿಯ ವೆಜ್ ಲ್ಯಾಂಡ್ ಹೋಟೆಲ್ ಮಾಲೀಕ ನಂಜುಂಡಿ ಗ್ರಾಹಕರಿಗೆ ಹೋಳಿಗೆ ವಿತರಣೆ ಮಾಡುತ್ತಿದ್ದಾರೆ. ಆರ್ಸಿಬಿ ಈ ಬಾರಿ ಕಪ್ ಗೆದ್ದೇ ಗೆಲ್ಲುತ್ತದೆ ಎಂದಿರುವ ಅವರು, ಇಂದು ಮಧ್ಯಾಹ್ನದಿಂದ ರಾತ್ರಿ ಮ್ಯಾಚ್ ಗೆಲ್ಲುವವರೆಗೂ ಗ್ರಾಹಕರಿಗೆ ಹೋಳಿಗೆ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ.
Latest Videos