Karnataka Budget 2023; ಯೋಜನೆಗಳನ್ನು ಬಿಟ್ಟೀ ಭಾಗ್ಯಗಳು ಅಂತ ಹೀಯಾಳಿಸಿ ಶ್ರೀಸಾಮಾನ್ಯನ ವಿವೇಚನೆಯನ್ನು ಅವಮಾನಿಸಬೇಡಿ: ಸಿದ್ದರಾಮಯ್ಯ

Karnataka Budget 2023; ಯೋಜನೆಗಳನ್ನು ಬಿಟ್ಟೀ ಭಾಗ್ಯಗಳು ಅಂತ ಹೀಯಾಳಿಸಿ ಶ್ರೀಸಾಮಾನ್ಯನ ವಿವೇಚನೆಯನ್ನು ಅವಮಾನಿಸಬೇಡಿ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 07, 2023 | 4:14 PM

ಕೇಂದ್ರ ಸರ್ಕಾರದ ವೈಫಲ್ಯದಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಇವತ್ತಿನ ದಿನಗಳಲ್ಲಿ ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿಯೋಜನೆಗಳು ರಾಜ್ಯದ ಮಹಿಳೆಯರಿಗೆ ಒಂದಷ್ಟು ರಿಲೀಫ್ ಒದಗಿಸಲಿವೆ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿಧಾನ ಸಭೆಯಲ್ಲಿ ಇಂದು ಕರ್ನಾಟಕ ಬಜೆಟ್ 2023 ಮಂಡಿಸುವಾಗ ಕಾಂಗ್ರೆಸ್ ಪಕ್ಷ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳು ಎಂದು ಲೇವಡಿ ಮಾಡಿದ ವಿರೋಧ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಶ್ರೀಸಾಮಾನ್ಯನ (common man) ವಿವೇಚನೆಯನ್ನು ಅವಮಾನಿಸ ಬೇಡಿ ಎಂದು ಹೇಳಿದ ಮುಖ್ಯಮಂತ್ರಿಯವರು ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದರು. ಈ ಹಂತದಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ (Dr Baba Saheb Ambedkar) ಅವರು ಹೇಳಿದ ಭದ್ರತೆಗೆ ಖಾತರಿ ನೀಡದ ಆರ್ಥಿಕ ಯೋಜನಯಿಂದ ಯಾವ ಉಪಯೋಗವೂ ಇಲ್ಲ ಎಂಬ ಮಾತನ್ನು ಸಿದ್ದರಾಮಯ್ಯ ಉಲ್ಲೇಖಿಸಿರು. ಕಾಂಗ್ರೆಸ್ ಪಕ್ಷ ಘೋಷಿಸಿದ 5 ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ ಜಾರಿಗೆ ಬಂದಿದ್ದು ಮಹಿಳೆಯರು ಉಚಿತ ಸಾರಿಗೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆ ಜಾರಿಗೆ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಮುಖ್ಯಮಂತ್ರಿ ಹೇಳಿದರು. ಕೇಂದ್ರ ಸರ್ಕಾರದ ವೈಫಲ್ಯದಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಇವತ್ತಿನ ದಿನಗಳಲ್ಲಿ ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿಯೋಜನೆಗಳು ರಾಜ್ಯದ ಮಹಿಳೆಯರಿಗೆ ಒಂದಷ್ಟು ರಿಲೀಫ್ ಒದಗಿಸಲಿವೆ ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ