Loading video

ನನ್ನಲ್ಲಿ ಧೈರ್ಯ ತುಂಬಲು ಅಷ್ಟು ದೂರದಿಂದ ಬಂದ ಅಜ್ಜಿಗೆ ಹೇಗೆ ಕೃತಜ್ಞತೆ ಸಲ್ಲಿಸುವುದು? ಪಲ್ಲವಿ ರಾವ್

Updated on: Apr 29, 2025 | 8:07 PM

ತನಗೆ ಧೈರ್ಯ ತೆಗೆದುಕೊಳ್ಳಲು ಅಜ್ಜಿ ಹೇಳಿದ್ದಾರೆ, ಉಗ್ರರು ಯಾವುದೇ ಬಿಲದಲ್ಲಿ ಅಡಗಿ ಕುಳಿತಿದ್ದರೂ ಪ್ರಧಾನಿ ಮೋದಿಯವರು ಹುಡುಕಿ ಹೊಡೆಯುತ್ತಾರೆ ಎಂದು ಅವರು ಹೇಳಿದ್ದಾರೆ, ಅವರು ಮಾತಾಡಿದ್ದನ್ನು ಎಲ್ಲರೂ ಕೇಳಿಸಿಕೊಂಡಿದ್ದಾರೆ, ಕೇವಲ ಟಿವಿಯಲ್ಲಿ ನೋಡಿ ಕೇಳಿ ಶಿವಮ್ಮನವರು ಅಷ್ಟು ದೂರದಿಂದ ತಮ್ಮನ್ನು ಮಾತಾಡಿಸಲು ಬಂದಿರುವುದಕ್ಕೆ ಹೇಗೆ ರಿಯಾಕ್ಟ್ ಮಾಡಬೇಕೋ ಗೊತ್ತಾಗುತ್ತಿಲ್ಲ ಎಂದು ಪಲ್ಲವಿಯವರು ಹೇಳಿದರು.

ಶಿವಮೊಗ್ಗ, ಏಪ್ರಿಲ್ 29: ಕಳೆದ ವಾರ ಉಗ್ರರ ಗುಂಡಿನ ದಾಳಿಯಲ್ಲಿ ಪತಿ ಮಂಜುನಾಥ್ ರಾವ್ (Manjunath Rao) ಅವರನ್ನು ಕಳೆದುಕೊಂಡ ಶಿವಮೊಗ್ಗದ ಪಲ್ಲವಿ ರಾವ್ ಮತ್ತು ತಿಪಟೂರಿನ ಶಿವಮ್ಮ ಅವರ ನಡುವೆ ಯಾವ ಸಂಬಂಧವೂ ಇಲ್ಲ. ಆದರೆ ಉಗ್ರರ ದಾಳಿ 103-ವರ್ಷದ ಶಿವಮ್ಮರನ್ನು ಪಲ್ಲವಿ ಅವರ ಕುಟುಂಬದೊಂದಿಗೆ ಬೆಸೆದಿದೆ. ಶಿವಮ್ಮ ತಮ್ಮನ್ನು ನೋಡಿ ಮಾತಾಡಿಸಿಕೊಂಡು ಹೋಗಲು, ಮತ್ತು ಇಲ್ಲಿಂದಲೇ ಪ್ರಧಾನಿ ಮೋದಿಯವರಿಗೆ ಉಗ್ರರನ್ನು ಬಿಡಬೇಡಿ, ಮಟ್ಟ ಹಾಕಿರಿ ಅಂತ ಸಂದೇಶ ನೀಡಿದ್ದು ಪಲ್ಲವಿಯವರಿಗೆ ಹೃದಯ ತುಂಬಿ ಬರುವಂತೆ ಮಾಡಿದೆ. ಶಿವಮ್ಮನವರ ಕಡೆ ಕೃತಜ್ಞತೆಯಿಂದ ನೋಡುತ್ತಾ, 103 ರ ಅಜ್ಜಿಗೆ ಇಷ್ಟು ರೋಷ ಇರಬೇಕಾದರೆ ನಮ್ಮ ಸೈನಿಕರಲ್ಲಿ ಇನ್ನೆಷ್ಟಿರಬೇಡ, ಪ್ರಧಾನಿ ಮೋದಿಯವರಿಗೆ ಎಲ್ಲ ವಿಚಾರಗಳು ಗೊತ್ತು, ಸೈನಿಕರಲ್ಲಿ ಬಲ ತುಂಬುವ ಕೆಲಸ ಅವರು ಮಾಡುತ್ತಿದ್ದಾರೆ, ನನ್ನ ಆಯಸ್ಸನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ ಎನ್ನುತ್ತ ಪಲ್ಲವಿಯವರು ಭಾವುಕರಾಗುತ್ತಾರೆ. ಅಜ್ಜಿಯ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ, ನಮ್ಮನ್ನು ಹುಡುಕಿಕೊಂಡು ಬಂದು ಮಾತಾಡಿಸಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಪಲ್ಲವಿಯವರು ಹೇಳಿದರು.

ಇದನ್ನೂ ಓದಿ:  ಪತಿ ಮಂಜುನಾಥ್ ಮೇಲೆ ನಡೆದ ಉಗ್ರರ ದಾಳಿಯನ್ನು ಮಾಧ್ಯಮಗಳಿಗೆ ವಿವರಿಸಿದ ಪಲ್ಲವಿ ರಾವ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ