ಹಿಂದೂ ಯುವತಿರನ್ನ ಲವ್ ಜಿಹಾದಿಗೆ ಬಲಿಯಾಗಲು ಬಿಡಲ್ಲ: ಕ್ರಾಂತಿಸೇನಾ ಸಂಘಟನೆಯಿಂದ ಪ್ರತಿಜ್ಞೆ
ಇತ್ತೀಚೆಗೆ ರಾಜ್ಯದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಪ್ರಕರಣಗಳ ಬೆನ್ನಲ್ಲೇ ಎಚ್ಚೆತ್ತ ಗದಗ ಕ್ರಾಂತಿಸೇನಾ ಸಂಘಟನೆ ಮಹಿಳೆಯರು, ಹಿಂದೂ ಯುವತಿರನ್ನ ಲವ್ ಜಿಹಾದಿಗೆ ಬಲಿಯಾಗಲು ಬಿಡಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಒಂದು ವೇಳೆ ಲವ್ ಜಿಹಾದ್ಗೆ ಬಲಿಯಾಗಿದ್ದರೆ ಅವರನ್ನು ರಕ್ಷಣೆ ಮಾಡುತ್ತೇವೆ. ಯುವತಿಯರಿಗೆ ಹಿಂದೂ ಧರ್ಮದ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದಿದ್ದಾರೆ.
ಗದಗ, ಫೆ.28: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಲವ್ ಜಿಹಾದ್(Love jihad) ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಹಿಂದೂ ಸಮಾಜದ ಯುವತಿರನ್ನ ಲವ್ ಜಿಹಾದಿಗೆ ಬಲಿಯಾಗುವುದಕ್ಕೆ ಬಿಡುವುದಿಲ್ಲ ಎಂದು ದೇವರ ಹೆಸರಲ್ಲಿ ಕ್ರಾಂತಿಸೇನಾ ಸಂಘಟನೆಯ ಮಹಿಳಾ ಸದಸ್ಯರು ಆಣೆ ಪ್ರಮಾಣ ಮಾಡಿದ್ದಾರೆ. ಗದಗ(Gadag)ನ ಕ್ರಾಂತಿಸೇನಾ ಮಹಿಳಾ ಸಂಘಟನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಮಾಣ ಸ್ವೀಕಾರ ಮಾಡಲಾಗಿದೆ. ಲವ್ ಜಿಹಾದ್ಗೆ ಬಲಿಯಾಗಿದ್ದರೆ ಅವರನ್ನು ರಕ್ಷಣೆ ಮಾಡುತ್ತೇವೆ. ಯುವತಿಯರಿಗೆ ಹಿಂದೂ ಧರ್ಮದ ಸಂಸ್ಕಾರ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಮಹಿಳೆಯರ, ಯುವತಿಯರ ರಕ್ಷಣೆಗಾಗಿ ನಾವು ಯಾವುದೇ ಸಂಘರ್ಷಕ್ಕೂ ತಯಾರಿದ್ದೇವೆ ಎಂದು ಪ್ರಮಾಣ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಗದಗ ನಗರದಲ್ಲಿ ಕ್ಷತ್ರೀಯ ಸಮಾಜದ ಕಾರ್ಯಕ್ರಮದಲ್ಲಿ ಯುವತಿಯರಿಗೆ ಆಣೆ ಪ್ರಮಾಣ ಮಾಡಿಸಿ ಪ್ರೀತಿ ಬಲೆಯಲ್ಲಿ ಬೀಳದಂತೆ ವಚನ ತೆಗೆದುಕೊಂಡಿತ್ತು. ಈಗ ಅದೇ ಸಮಾಜದ ಕ್ರಾಂತಿಸೇನಾ ಸಂಘಟನೆಯ ಮಹಿಳಾ ಸದಸ್ಯರು ಮೊತ್ತೊಮ್ಮೆ ಶಪತ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ