ಗದಗ ಲವ್ ಜಿಹಾದ್ ಪ್ರಕರಣಕ್ಕೆ ಮೇಜರ್​​ ಟ್ವಿಸ್ಟ್: ಅವನೂ ಬೇಡ- ಅಪ್ಪ ಅಮ್ಮನೂ ಬೇಡ ಎಂದ ಬಾಧಿತ ಹಿಂದೂ ಯುವತಿ

ಗದಗ ಜಿಲ್ಲೆಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! ಮಾಧ್ಯಮಗಳ ವರದಿ ಬಳಿಕ ಎಚ್ಚೆತ್ತ ಪೊಲೀಸ್ರು ಯುವಕ, ಯುವತಿಯನ್ನು ಕರೆತಂದಿದ್ದಾರೆ...! ಯುವತಿಯ ಸ್ಟೇಟ್ಮೆಂಟ್ ಕೇಳಿ ಪೋಷಕರು ಬೆಚ್ಚಿಬಿದ್ದಿದ್ದಾರೆ! ಮುಸ್ಲಿಂ ಯುವಕ ಅಮೀರ್ ಈಗಾಗಲೇ ಒಂದು ಮದುವೆಯಾಗಿದ್ದಾನೆ. ಹಾಗೇ ಮೂರ್ನಾಲು ಹಿಂದೂ ಯುವತಿಯರ ಜೊತೆಗೆ ಪ್ರೀತಿ ಪ್ರೇಮ ಅಂತಾ ನಾಟಕ ಮಾಡ್ತಾಯಿದ್ದಾನಂತೆ ಎಂದು ಪೋಷಕರು ಆರೋಪ ಮಾಡಿದ್ದಾರೆ.

ಗದಗ ಲವ್ ಜಿಹಾದ್ ಪ್ರಕರಣಕ್ಕೆ ಮೇಜರ್​​ ಟ್ವಿಸ್ಟ್: ಅವನೂ ಬೇಡ- ಅಪ್ಪ ಅಮ್ಮನೂ ಬೇಡ ಎಂದ ಬಾಧಿತ ಹಿಂದೂ ಯುವತಿ
ಗದಗ ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್: ಅವನೂ ಬೇಡ- ಅಪ್ಪಅಮ್ಮನೂ ಬೇಡವೆಂದ ಹಿಂದೂ ಯುವತಿ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಸಾಧು ಶ್ರೀನಾಥ್​

Updated on:Feb 03, 2024 | 9:59 AM

ಗದಗ, ಫೆಬ್ರವರಿ 3: 19 ವರ್ಷದ ಹಿಂದೂ (Hindu) ಯುವತಿಯನ್ನು ಲವ್ ಜಿಹಾದ್ ಬಲೆಗೆ (Gadag Love Jihad) ಹಾಕಿ, ಮದುವೆಯಾದ ಮುಸ್ಲಿಂ ಯುವಕ ಅವಳನ್ನು ಕಿಡ್ನಾಪ್ ಮಾಡಿದ್ದ. 15 ದಿನಗಳ‌ ಕಾಲ ಹಿಂದೂ ಯುವತಿ ಹಾಗೂ ಯುವಕ ನಾಪತ್ತೆಯಾಗಿದ್ರು. ಇದೊಂದು ಲವ್ ಜಿಹಾದ್ ಎಂದು ಯುವತಿಯ ಕುಟುಂಬಸ್ಥರ ಗಂಭೀರವಾದ ಆರೋಪ‌ ಮಾಡಿದ್ರು. ಹೀಗಾಗಿ ಪೊಲೀಸರು ಎಚ್ಚತ್ತುಕೊಂಡು ಯುವತಿಯರನ್ನು ಪತ್ತೆ ಮಾಡಿ, ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಆದ್ರೆ, ಯುವತಿಯ ಸ್ಟೇಟ್ಮೆಂಟ್ ಕೇಳಿ ಪೊಲೀಸರೆ (Betageri Police) ಬೆಚ್ಚಿಬಿದ್ದಿದ್ದಾರೆ‌. ಲವ್ ಜಿಹಾದ್ ಕೇಸ್ (Muslim)ಮತ್ತೆ ಕಗ್ಗಂಟಾಗಿ ಉಳಿದುಕೊಂಡಿದೆ. ಮುಂದೆ ಯಾವ ತಿರುವು ಪಡೆದುಕೊಳ್ಳುತ್ತೇ ಕಾದು ನೋಡ್ಬೇಕು.

ಎಸ್… ಗದಗ ಜಿಲ್ಲೆಯಲ್ಲಿ ಆಗಾಗ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರ್ತಾಯಿವೆ. ಇದೇ ಜನವರಿ 16 ರಂದು ಗದಗ ಬೆಟಗೇರಿಯ ಮಂಜುನಾಥ ನಗರದ ನಿವಾಸಿಯಾದ 19 ವರ್ಷದ ಕಾವ್ಯ ಎನ್ನುವ ಯುವತಿ ಕಿಡ್ನಾಪ್ ಆಗಿದ್ಲು. ಯುವತಿ ಎದುರು ಮನೆಯಲ್ಲಿದ್ದ ಮುಸ್ಲಿಂ ಯುವಕ ಅಮೀರ್ ಎನ್ನುವಾತ ತನ್ನ ಪ್ರೀತಿಯ ಬಲೆಗೆ ಕೆಡವಿ ಕಿಡ್ನಾಪ್ ಮಾಡಿದ್ದಾನೆ ಎಂದು ಯುವತಿ ಪೋಷಕರು ಆರೋಪ ಮಾಡಿದ್ರು.

ಮಾಧ್ಯಮಗಳಲ್ಲಿ ಲವ್ ಜಿಹಾದ್ ಪ್ರಕರಣ ಸದ್ದು ಮಾಡಿದ ಕೂಡಲೇ ಬೆಟಗೇರಿ ಪೊಲೀಸರು ಎಚ್ಚತ್ತುಕೊಂಡ್ರು. ಜನವರಿ 31 ರಂದು ಕಿಡ್ನಾಪ್ ಆಗಿದ್ದ ಕಾವ್ಯಳನ್ನು ಪತ್ತೆ ಮಾಡಿ, ಬೆಟಗೇರಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಆಗ ಯುವತಿ ಸ್ಟೇಟ್ಮೆಂಟ್ ಕೇಳಿ ಅಕ್ಷರಶಃ ಪೊಲೀಸರೆ ಬೆಚ್ಚಬಿದ್ದಿದ್ದಾರೆ‌.

ಇದನ್ನೂ ಓದಿ:  ಗದಗದಲ್ಲಿ ಲವ್ ಜಿಹಾದ್ ಬೆಳಕಿಗೆ: ವಿವಾಹಿತ ಮುಸ್ಲಿಂ ಯುವಕನ ಮೋಸದ ಜಾಲಕ್ಕೆ ಬಿದ್ದ ಹಿಂದೂ ಯುವತಿ

ಹೌದು ನಾನು ಅಮೀರ್ ನ್ನು ಪ್ರೀತಿ ಮಾಡ್ತಾಯಿದ್ದೇನೆ, ಯಾವುದೇ ಲವ್ ಜಿಹಾದ್ ಇಲ್ಲಾ. ನಾನೇ ಅವನನ್ನು ಪ್ರೀತಿ ಮಾಡುತ್ತಿದ್ದೇನೆ, ಅವನಿಗೆ ಈಗಾಲೇ ಮದುವೆಯಾಗಿರೋದು ನನಗೆ ಗೊತ್ತಿದೆ. ಹೀಗಾಗಿ ಅವನ ಜೊತೆಗೆ ಹೋಗಿದ್ದೆ, ನಾನು ಈವರೆಗೆ ಮದುವೆಯಾಗಿಲ್ಲಾ ಎಂದು ಕಾವ್ಯ ಸ್ಪಷ್ಟಪಡಿಸಿದ್ದಾಳೆ.

ಆದ್ರೂ ಈಗ ಕಾವ್ಯ ಮುಸ್ಲಿಂ ಯುವಕನ ಜೊತೆಗೆ ಹೋಗಲು ನಿರಾಕರಣೆ ಮಾಡಿದ್ದಾಳೆ. ಪೋಷಕರ ಜೊತೆಗೆ ಹೋಗಲು ಒಪ್ಪಿಲ್ಲ. ಹೀಗಾಗಿ ಯುವತಿಯನ್ನು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. 15 ದಿನಗಳ ನಂತರ ತನ್ನ ನಿರ್ಧಾರವನ್ನು ಹೇಳುತ್ತೇನೆ ಅಂತಾನೂ ತಿಳಿಸಿದ್ದಾಳೆ. ಇನ್ನು ಪ್ರಕರಣವನ್ನು ತನಿಖೆ ಮಾಡಲಾಗುತ್ತಿದೆ ಅಂತಾ ಗದಗ ಎಸ್ಪಿ ಬಿ ಎಸ್ ನೇಮಕಗೌಡ ಹೇಳಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಿದರೆ ನಮ್ಮ ಮಕ್ಕಳೂ ಲೆಹೆಂಗಾ ಧರಿಸಿ ಶಾಲೆಗೆ ಬರ್ತಾರೆ: ಬಿಜೆಪಿ ಶಾಸಕ

ಮುಸ್ಲಿಂ ಯುವಕ ಅಮೀರ್ ಈಗಾಗಲೇ ಒಂದು ಮದುವೆಯಾಗಿದ್ದಾನೆ. ಹಾಗೇ ಮೂರ್ನಾಲು ಹಿಂದೂ ಯುವತಿಯರ ಜೊತೆಗೆ ಪ್ರೀತಿ ಪ್ರೇಮ ಅಂತಾ ನಾಟಕ ಮಾಡ್ತಾಯಿದ್ದಾನಂತೆ. ಈ ವಾಗ ಮುಗ್ದ 19 ವರ್ಷದ ಯುವತಿಯ ಜೊತೆಗೆ ಪ್ರೀತಿ ಪ್ರೇಮ ಅಂತಾ ಹೇಳಿ ಅವಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ಮುಂದಾಗಿದ್ದಾನೆ ಎಂದು ಪೋಷಕರು ಆರೋಪ ಮಾಡಿದ್ದಾರೆ.

ಸಗದಗ ಜಿಲ್ಲೆಯಲ್ಲಿ ಇಂಥ ಪ್ರಕರಣಗಳು ಪದೇ ಪದೇ ನಡೆಯುತ್ತಿವೆ. ಹೀಗಾಗಿ ಗದಗ ಜಿಲ್ಲೆಯಲ್ಲಿ ಲವ್ ಜಿಹಾದ್ ವ್ಯವಸ್ಥಿತವಾಗಿ ನಡೆಯುತ್ತಿದೆಯಾ ಅನ್ನೋ ಅನುಮಾನ ಕಾಡ್ತಾಯಿದೆ. ಇನ್ನೂ ಶ್ರೀರಾಮ ಸೇನೆ ಸಂಘಟನೆ ಮುಖಂಡರು ಇದೊಂದು ಲವ್ ಜಿಹಾದ್ ಪ್ರಕರಣ ಅಂತಿದೆ. ಹೀಗಾಗಿ ಇಡೀ ಪ್ರಕರಣ ಸಂಪೂರ್ಣ ತನಿಖೆ ನಡೆದಾಗ ಮಾತ್ರ ಇಲ್ಲಿ ಲವ್ ಜಿಹಾದ್ ನಡೆದಿದೆಯೋ ಅಥವಾ ಬೇರೆ ಕಾರಣವೋ ಅನ್ನೋದು ಗೊತ್ತಾಲಿದೆ.

Published On - 9:58 am, Sat, 3 February 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ