ಶೇರು ಮಾರುಕಟ್ಟೆ ಯಾಕೆ ಕುಸಿಯುತ್ತದೆ, ಅದು ಆತಂಕಕಾರಿ ವಿಷಯವೇ? ಡಾ ಬಾಲಾಜಿ ರಾವ್ ವಿವರಿಸುತ್ತಾರೆ
ಕೆಲ ಕಂಪನಿಗಳು ವರ್ಷವಿಡೀ ಮತ್ತು ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಾ ಸಾಗುತ್ತವೆ. ಆದರೆ, ಕೆಲ ಕಂಪನಿಗಳ ಪರ್ಫಾರ್ಪಾನ್ಸ್ ಪ್ರತಿ ತ್ರೈಮಾಸಿಕದಲ್ಲಿ ಏಳಿಗೆ ಕಾಣಲಾರದು. ಅದಕ್ಕೆ ಹಲವಾರು ಕಾರಣಗಳಿರುತ್ತವೆ.
ಇಂದು ಅಂದರೆ ಶುಕ್ರವಾರ ಶೇರು ಮಾರುಕಟ್ಟೆ 1,300 ಕ್ಕಿಂತ ಹೆಚ್ಚು ಅಂಕಗಳಷ್ಟು ಕುಸಿದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಹಾಗೆ ಕುಸಿಯೋದು ಆತಂಕಕಾರಿ ವಿಷಯವೇ, ಹೂಡಿಕೆದಾರರ ಹಣ ಮುಳುಗಿ ಬಿಡುತ್ತಾ ಎಂಬ ಪ್ರಶ್ನೆಗಳು ಶೇರು ಮಾರ್ಕೆಟ್ ಬಗ್ಗೆ ಹೆಚ್ಚು ಗೊತ್ತಿಲ್ಲದವರು ಯೋಚನೆ ಮಾಡುವುದು ಸಹಜವೇ. ಆದರೆ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಡಿಜಿ ಶೇರು ಮಾರ್ಕೆಟ್ನಲ್ಲಿ ಇಂಥ ಏರಿಳಿತಗಳು ಸಹಜ, ಹೂಡಿಕೆದಾರರು ಗಾಬರಿಪಡುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ. ಓಕೆ ಯಾಕೆ ಶೇರು ಮಾರ್ಕೆಟ್ ನಲ್ಲಿ ಯಾಕೆ ಏರಿಳಿತಗಳು ಜರುಗುತ್ತವೆ ಅನ್ನೋದನ್ನು ಅವರು ವಿವರಿಸುತ್ತಾರೆ.
ಮಾರ್ಕೆಟ್ ನಲ್ಲಿ ಲಿಸ್ಟೆಡ್ ಕಂಪನಿಯ ಪರ್ಫಾರ್ಮನ್ಸ್ ನಮ್ಮ ಮಕ್ಕಳ ಶಾಲಾ ಪ್ರೊಗ್ರೆಸ್ ಕಾರ್ಡ್ ಗೆ ಹೋಲಿಕೆಯಾಗಿದೆ ಎಂದು ಡಾ ರಾವ್ ಹೇಳುತ್ತಾರೆ. ಬುದ್ಧಿವಂತ ಮಕ್ಕಳು ಪ್ರತಿ ಟರ್ಮ್ ನ ಪರೀಕ್ಷೆಯಲ್ಲಿ ಉತ್ತಮ ಗ್ರೇಡ್ ಪಡೆಯುತ್ತಾ ಸಾಗಿದ ಹಾಗೆಯೇ, ಕೆಲ ಕಂಪನಿಗಳು ವರ್ಷವಿಡೀ ಮತ್ತು ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಾ ಸಾಗುತ್ತವೆ. ಆದರೆ, ಕೆಲ ಕಂಪನಿಗಳ ಪರ್ಫಾರ್ಪಾನ್ಸ್ ಪ್ರತಿ ತ್ರೈಮಾಸಿಕದಲ್ಲಿ ಏಳಿಗೆ ಕಾಣಲಾರದು. ಅದಕ್ಕೆ ಹಲವಾರು ಕಾರಣಗಳಿರುತ್ತವೆ.
ನಮ್ಮ ಬದುಕಿನಲ್ಲಿ ಪಿತೃಪಕ್ಷ ಅಥವಾ ಆಷಾಢ ಮಾಸಗಳು ಬರುವ ಹಾಗೆ, ಕಂಪನಿಗಳ ಪರ್ಫಾರ್ಮನ್ಸ್ನಲ್ಲೂ ಅಂಥ ಸ್ಥಿತಿ ಎದುರಾಗುತ್ತದೆ ಎಂದು ಡಾ ರಾವ್ ಹೇಳುತ್ತಾರೆ. ಕೆಲವು ಸಲ ಜಿಯೋ ಪೊಲಿಟಿಕಲ್ ವಿಷಯಗಳು ಮಾರ್ಕೆಟ್ ಮೇಲೆ ಪ್ರಭಾವ ಬೀರುತ್ತವೆ. ಪ್ರತಿವರ್ಷ ಉತ್ತಮ ಪ್ರೊಗ್ರೆಸ್ ತೋರುವ ಕಂಪನಿಯು ತನ್ನ ಹೂಡಿಕೆದಾರರಿಗೆ ಸಹಜವಾಗೇ ಲಾಭ ತಂದುಕೊಡುತ್ತದೆ.
ಆದರೆ, ಹೇಳಿಕೊಳ್ಳುವಂಥ ಸಾಧನೆ ಮಾಡದ ಕಂಪನಿಯ ಶೇರಿನ ಮೌಲ್ಯದಲ್ಲಿ ಹೆಚ್ಚಳ ಕಾಣಿಸುವುದಿಲ್ಲವಾದರೂ ಅದು ಆತಂಕಕಾರಿ ವಿಷಯ ಅಲ್ಲ, ಒಂದು ತ್ರೈಮಾಸಿಕನಲ್ಲಿ ಉತ್ತಮ ಸಾಧನೆ ತೋರದ ಕಂಪನಿಯೊಂದು ಮುಂದಿನ ಕ್ವಾರ್ಟರ್ನಲ್ಲಿ ಚೆನ್ನಾಗಿ ಪರ್ಫಾರ್ಮ್ ಮಾಡುತ್ತದೆ ಎಂದು ಡಾ ರಾವ್ ಹೇಳುತ್ತಾರೆ.
ಈ ಹಿನ್ನೆಲೆಯಲ್ಲೇ ನಾವು ಹೂಡಿಕೆ ಮಾಡುವ ಮೊದಲು ಕಂಪನಿಗಳ ವಾರ್ಷಿಕ ಸಾಧನೆ, ಇದುವವರೆಗಿನ ಒಟ್ಟಾರೆ ಸಾಧನೆ ಮೊದಲಾದದವುಗಳ ಬಗ್ಗೆ ಸಂಶೋಧನೆ ಮಾಡಬೇಕು. ಭಾರತದ ಖ್ಯಾತ ಹೂಡಿಕೆದಾರ ಜುಂಜುನ್ವಾಲಾ ಅದನ್ನೇ ಮಾಡುತ್ತಾರೆ ಎಂದು ಡಾ ಬಾಲಾಜಿ ರಾವ್ ಹೇಳುತ್ತಾರೆ.