Daily Devotional: ಸ್ತ್ರೀಯರು ರಜಸ್ವಲದ ಸಮಯದಲ್ಲಿ ಹೇಗಿರಬೇಕು?

Updated on: Jul 06, 2025 | 6:58 AM

ಡಾ. ಬಸವರಾಜ್ ಗುರೂಜಿ ಅವರು ದೈನಂದಿನ ಭಕ್ತಿ ಕಾರ್ಯಕ್ರಮದಲ್ಲಿ ರಜಸ್ವಲೆಯ ಸಮಯದಲ್ಲಿ ಮಹಿಳೆಯರು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರ ಬಗ್ಗೆ ವಿವರಿಸಿದ್ದಾರೆ. ಪ್ರಾಚೀನ ಪದ್ಧತಿಗಳು ಮತ್ತು ಆಧುನಿಕ ದೃಷ್ಟಿಕೋನಗಳನ್ನು ಹೋಲಿಸುತ್ತಾ, ಈ ಸಮಯದಲ್ಲಿ ಯಾವುದೇ ಅಶುಭ ಅಥವಾ ದೋಷಗಳಿಲ್ಲ ಎಂದು ತಿಳಿಸಲಾಗಿದೆ. ವಿಡಿಯೋ ನೋಡಿ.

ಬೆಂಗಳೂರು, ಜುಲೈ 06: ಡಾ. ಬಸವರಾಜ್ ಗುರೂಜಿ ಅವರು ದೈನಂದಿನ ಭಕ್ತಿ ಕಾರ್ಯಕ್ರಮದಲ್ಲಿ ರಜಸ್ವಲೆಯ ಸಮಯದಲ್ಲಿ ಮಹಿಳೆಯರ ಧಾರ್ಮಿಕ ಚಟುವಟಿಕೆಗಳ ಬಗ್ಗೆ ಮಾತನಾಡಿದ್ದಾರೆ. ಹಿಂದಿನ ಕಾಲದಲ್ಲಿ, ರಜಸ್ವಲೆಯ ಸಮಯದಲ್ಲಿ ಮಹಿಳೆಯರನ್ನು ಧಾರ್ಮಿಕ ಚಟುವಟಿಕೆಗಳಿಂದ ದೂರವಿರುತ್ತಿದ್ದರು. ಆದರೆ, ಗುರೂಜಿ ಅವರ ಪ್ರಕಾರ, ರಜಸ್ವಲೆ ಒಂದು ಸಹಜವಾದ ಪ್ರಕ್ರಿಯೆಯಾಗಿದ್ದು, ಇದು ಯಾವುದೇ ಅಶುಭವಲ್ಲ ಅಥವಾ ದೋಷವಲ್ಲ. ದೇವಾಲಯಕ್ಕೆ ಹೋಗುವುದು ಅಥವಾ ಯಾವುದೇ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದಕ್ಕೆ ಇದು ಅಡ್ಡಿಯಾಗುವುದಿಲ್ಲ ಎಂದಿದ್ದಾರೆ.