‘ಯುವ ಸಿನಿಮಾದ ಪೈರಸಿ ಮಾಡಿದವರನ್ನು ಗಡಿಪಾರು ಮಾಡಿ’: ಫ್ಯಾನ್ಸ್ ಒತ್ತಾಯ
‘ಯುವ ರಾಜ್ಕುಮಾರ್ ನಟನೆಯ ಯುವ ಚಿತ್ರ ಬಿಡುಗಡೆ ಆದಾಗ ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ. ಪೈರಸಿ ಮಾಡಿ ಬಿಟ್ಟಿದ್ದಾರೆ. ಈ ರೀತಿ ಮಾಡೋದರಿಂದ ಏನು ಲಾಭ? ಇವತ್ತು ಇವನು ಹಾಕಿದ ಅಂತ ನಾಳೆ ಇನ್ನೊಬ್ಬ ಹಾಕುತ್ತಾನೆ. ಅದೇ ಮುಂದುವರಿಯುತ್ತಾ ಹೋಗುತ್ತದೆ. ಮೊದಲು ಇಂಥವರನ್ನು ಗಡಿಪಾರು ಮಾಡಬೇಕು’ ಎಂದು ಡಾ. ರಾಜ್ ಕುಟುಂಬದ ಅಭಿಮಾನಿಗಳು ಹೇಳಿದ್ದಾರೆ.
ಡಾ. ರಾಜ್ಕುಮಾರ್ (Dr Rajkumar) ಕುಟುಂಬದವರ ಬಗ್ಗೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ. ಇದರಿಂದ ದೊಡ್ಮನೆ ಕುಟುಂಬದ ಅಭಿಮಾನಿಗಳಿಗೆ ಬೇಸರ ಆಗಿದೆ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆದ ‘ಯುವ’ ಸಿನಿಮಾವನ್ನು (Yuva Movie) ಪೈರಸಿ ಮಾಡಲಾಯಿತು ಎಂದು ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಅಲ್ಲದೇ, ಇದು ಫ್ಯಾನ್ಸ್ ವಾರ್ ಅಲ್ಲ ಎಂದು ಕೂಡ ಅವರು ಹೇಳಿದ್ದಾರೆ. ‘ಫ್ಯಾನ್ಸ್ ವಾರ್ ಆಗಿಲ್ಲ. ಅಪ್ಪು ಅವರು ಅಷ್ಟು ಒಳ್ಳೆಯ ಕೆಲಸ ಮಾಡಿ ಹೋಗಿದ್ದಾರೆ. ಶಿವಣ್ಣ ಅವರ ಪಾಡಿಗೆ ಅವರು ಕೆಲಸ ಮಾಡುತ್ತಿದ್ದಾರೆ. ನಮಗೂ ಅವರಿಗೂ ಫ್ಯಾನ್ಸ್ ವಾರ್ ನಡೆಯುವಂಥದ್ದು ಏನೂ ಇಲ್ಲ. ಎದುರುಬದರಾಗಿ ಸಿನಿಮಾ ಬಿಡುಗಡೆ ಆದರೆ ಅಭಿಮಾನಿಗಳು ಹಾಗೆಲ್ಲ ಮಾಡುತ್ತಾರೆ ಎನ್ನಬಹುದು. ಆದರೆ ಈಗ ಸುಮ್ಮನೆ ಹೀಗೆಲ್ಲ ಮಾಡುತ್ತಿದ್ದಾರೆ. ಮೊನ್ನೆ ಯುವ ರಾಜ್ಕುಮಾರ್ ಸಿನಿಮಾ ತೆರೆಕಂಡಾಗ ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ. ಪೈರಸಿ (Piracy) ಮಾಡಿ ಬಿಟ್ಟಿದ್ದು, ಎಲ್ಲ ಮೊಬೈಲ್ನಲ್ಲಿ ಹರಿದಾಡಿದೆ. ಈ ರೀತಿ ಮಾಡೋದರಿಂದ ಏನು ಲಾಭ? ಇವತ್ತು ಇವನು ಹಾಕಿದ ಅಂತ ನಾಳೆ ಇನ್ನೊಬ್ಬ ಹಾಕುತ್ತಾನೆ. ಅದೇ ಮುಂದುವರಿಯುತ್ತದೆ. ಇಂಥವರನ್ನು ಮೊದಲು ಗಡಿಪಾರು ಮಾಡಬೇಕು’ ಎಂದು ಅಣ್ಣಾವ್ರ ಕುಟುಂಬದ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.