Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ ಸೌಂದರ್ಯ ಕಾಫಿ ಕುಡಿಯುತ್ತಿದ್ದ ಸ್ಟಾಲ್​​​​ನವರಿಗೆ ಅವರು ಸತ್ತ ನಂತರವೇ ಯಡಿಯೂರಪ್ಪನವರ ಮೊಮ್ಮಗಳು ಅಂತ ಗೊತ್ತಾಗಿದ್ದು

ಡಾ ಸೌಂದರ್ಯ ಕಾಫಿ ಕುಡಿಯುತ್ತಿದ್ದ ಸ್ಟಾಲ್​​​​ನವರಿಗೆ ಅವರು ಸತ್ತ ನಂತರವೇ ಯಡಿಯೂರಪ್ಪನವರ ಮೊಮ್ಮಗಳು ಅಂತ ಗೊತ್ತಾಗಿದ್ದು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 29, 2022 | 10:58 PM

ಸಾಮಾನ್ಯವಾಗಿ ಗಣ್ಯರ ಮಕ್ಕಳು ಮತ್ತು ಸಂಬಂಧಿಕರು ತಮಗೆ ಸ್ಪೆಷಲ್ ಗಮನ, ಟ್ರೀಟ್ ಸಿಗಲಿ ಅಂತ ನೇರವಾಗಿಯೋ ಅಥವಾ ಅಪರೋಕ್ಷವಾಗಿಯೋ ಗಣ್ಯರೊಂದಿಗಿನ ತಮ್ಮ ಸಂಬಂಧ ಹೇಳಿಕೊಳ್ಳುತ್ತಾರೆ. ಸಂಬಂಧ ಇಲ್ಲದವರೂ ಹಾಗೆ ಹೇಳಿದ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ ಮತ್ತು ಕೇಳಿಸಿಕೊಂಡಿದ್ದೇವೆ.

ಶುಕ್ರವಾರ ಆತ್ಮಹತ್ಯೆಯ ಮೂಲಕ ನಿಧನರಾದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಮೊಮ್ಮಗಳು ಡಾ ಸೌಂದರ್ಯ (Dr Soundarya) ಅವರು ಸರಳ ನಡೆ ನುಡಿಯವರಾಗಿದ್ದರು ಅಂತ ಅವರು ಕಾಫಿ ಕುಡಿಯುತ್ತಿದ್ದ ಮಿಲ್ಕ್ ಪಾರ್ಲರ್ ಮಾಲೀಕರೊಬ್ಬರು ಹೇಳುತ್ತಾರೆ. ಸೌಂದರ್ಯ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ (assistant professor) ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಒಂದು ವರ್ಷದಿಂದ ಅವರ ಹೆರಿಗೆ ರಜೆ (maternity leave) ಮೇಲಿದ್ದರಂತೆ. ಅವರಿಗೆ 6 ತಿಂಗಳು ಮಗು ಇರುವ ವಿಷಯವನ್ನು ನಾವು ಈಗಾಗಲೇ ಚರ್ಚಿಸಿದ್ದೇವೆ. ಸೌಂದರ್ಯ ಅವರು ಇಲ್ಲಿ ಕಾಣುತ್ತಿರುವ ನಂದಿನಿ ಮಿಲ್ಕ್ ಪಾರ್ಲರ್ ನಲ್ಲಿ ನಿಯಮಿತವಾಗಿ ಕಾಫಿ ಕುಡಿಯುತ್ತಿದ್ದರಂತೆ. ಬೂತ್​ನವರು ಹೇಳುವ ಪ್ರಕಾರ ಕಳೆದ ನವೆಂಬರ್​ನಿಂದ ಸೌಂದರ್ಯ ಇಲ್ಲಿಗೆ ಬರುತ್ತಿದ್ದರು. ಆದರೆ ಗಮನಿಸಬೇಕಾದ ಸಂಗತಿಯೇನೆಂದರೆ, ಸೌಂದರ್ಯ ಮರಣಿಸಿದ ನಂತರವೇ ಅವರು ಯಡಿಯೂರಪ್ಪನವರ ಮಗಳು ಅಂತ ಬೂತ್​ನವರಿಗೆ ಗೊತ್ತಾಗಿದ್ದು.

ಸಾಮಾನ್ಯವಾಗಿ ಗಣ್ಯರ ಮಕ್ಕಳು ಮತ್ತು ಸಂಬಂಧಿಕರು ತಮಗೆ ಸ್ಪೆಷಲ್ ಗಮನ, ಟ್ರೀಟ್ ಸಿಗಲಿ ಅಂತ ನೇರವಾಗಿಯೋ ಅಥವಾ ಅಪರೋಕ್ಷವಾಗಿಯೋ ಗಣ್ಯರೊಂದಿಗಿನ ತಮ್ಮ ಸಂಬಂಧ ಹೇಳಿಕೊಳ್ಳುತ್ತಾರೆ. ಸಂಬಂಧ ಇಲ್ಲದವರೂ ಹಾಗೆ ಹೇಳಿದ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ ಮತ್ತು ಕೇಳಿಸಿಕೊಂಡಿದ್ದೇವೆ.

ಅದರೆ, ಸೌಂದರ್ಯ ಮಾತ್ರ ಯಾವತ್ತೂ ತಮ್ಮ ಪರಿಚಯ ಹೇಳಿಕೊಂಡಿರಲಿಲ್ಲ. ಬೂತ್ ನವರೊಂದಿಗೆ ಸಭ್ಯತೆಯಿಂದ ಅಣ್ಣ ಅಂತ ಮಾತಾಡುತ್ತಿದ್ದರಂತೆ. ನಿಮಗೆ ಗೊತ್ತಿದೆ, ಯಡಿಯೂರಪ್ಪ ಸಹ ಜನರನ್ನು ಅಣ್ಣ ಅಂತಲೇ ಸಂಬೋಧಿಸುತ್ತಾರೆ.

ಇದನ್ನೂ ಓದಿ:  ಆತ್ಮಹತ್ಯೆ ಮೂಲಕ ನಿಧನ ಹೊಂದಿದ ಯಡಿಯೂರಪ್ಪನವರ ಮೊಮ್ಮಗಳು ಸೌಂದರ್ಯ ಬೆಂಗಳೂರಿಗೆ ಶಿಫ್ಟ್ ಆಗಿ ವರ್ಷ ಮಾತ್ರ ಕಳೆದಿತ್ತು