ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ಕೋವಿಡ್​ ಟೆಸ್ಟಿಂಗ್ ಲ್ಯಾಬ್ ಸಿಬ್ಬಂದಿ ಪಾನಮತ್ತರಾಗಿ ಕೆಲಸ ಮಾಡುತ್ತರೆ ಎಂದರು ಪ್ರಯಾಣಿಕರು!

ನೈಟ್ ಶಿಫ್ಟ್​ ನಲ್ಲಿ ಕೆಲಸ ಮಾಡುವ ಟೆಕ್ನಿಶಿಯನ್​​ಗಳು ಪಾನಮತ್ತರಾಗಿ ಕೆಲಸಕ್ಕೆ ಬರುವುದರಿಂದ ಪ್ರಮಾದಗಳು ಜರುಗುತ್ತಿವೆ ಎನ್ನುತ್ತಾರೆ ಪ್ರಯಾಣಿಕರು. ಏರಪೋರ್ಟ್​ ನಂಥ ಬಹುಮುಖ್ಯ ಸ್ಥಳದಲ್ಲಿ ಇಂಥ ಬೇಜವಾಬ್ದಾರಿ ಲ್ಯಾಬ್​​ ಗೆ ಹೊಣೆಗಾರಿಕೆ ವಹಿಸಿರುವುದು ಅಕ್ಷಮ್ಯ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ಕೋವಿಡ್​ ಟೆಸ್ಟಿಂಗ್ ಲ್ಯಾಬ್ ಸಿಬ್ಬಂದಿ ಪಾನಮತ್ತರಾಗಿ ಕೆಲಸ ಮಾಡುತ್ತರೆ ಎಂದರು ಪ್ರಯಾಣಿಕರು!
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 30, 2022 | 1:36 AM

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಸೋಂಕಿನ ಟೆಸ್ಟ್​ ಮಾಡಲು ನಿಯುಕ್ತಿಗೊಂಡಿರುವ ಔರಿಗಾ ರೀಸರ್ಷ್​ ಪ್ರವೇಟ್​ ಲಿಮಿಟೆಡ್​ನಲ್ಲಿ (Auriga Research Private Limited ) ಕೆಲಸ ಮಾಡುವ ಟೆಕ್ನಿಶಿಯನ್ ಗಳು ಎಸಗುವ ಗುರುತರ ಪ್ರಮಾದಗಳ ವಿರುದ್ಧ ಪ್ರಯಾಣಿಕರು ಪದೇಪದೆ ದೂರು ಸಲ್ಲಿಸುತ್ತಿದರೂ ಏರ್​ಪೋರ್ಟ್​ ಪ್ರಾಧಿಕಾರವಾಗಲೀ (airport authority), ರಾಜ್ಯ ಅರೋಗ್ಯ ಇಲಾಖೆಯಾಗಲೀ (state health department ) ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅವರು ಎಂಥ ತಪ್ಪು ಮಾಡಿದ್ದಾರೆ ಅನ್ನೋದನ್ನು ಕೊಂಚ ಗಮನಿಸಿ. ದುಬೈಗೆ ತೆರಳಬೇಕಿದ್ದ ಒಬ್ಬ ಯುವಕನಿಗೆ ಅರ್​ಟಿ-ಪಿಸಿಆರ್ ಟೆಸ್ಟ್​ ನಡೆಸಿ ರಿಸಲ್ಟ್​ ಪಾಸಿಟಿವ್ ಅಂತ ನೀಡಿದ್ದಾರೆ. ಆದರೆ ಆ ಯುವಕ ಬೇರೆ ಕಡೆ ಟೆಸ್ಟ್ ಮಾಡಿಸಿದಾಗ ಅವನಲ್ಲಿ ಸೋಂಕು ಪತ್ತೆಯಗದೆ ಫಲಿತಾಂಶ ನೆಗೆಟಿವ್ ಬಂದಿದೆ. ಆದರೆ, ಔರಿಗಾ ಲ್ಯಾಬ್ ನ ಪ್ರಮಾದಕರ ರಿಪೋರ್ಟ್​ ಕಾರಣ ಅ ಯುವಕ ದುಬೈಗೆ ಪ್ರಯಾಣಿಸುವುದು ಸಾಧ್ಯವಾಗಲಿಲ್ಲ. ಅವನು ಕೆಲಸ ಮಾಡುತ್ತಿದ್ದು ನೌಕರಿಗೇನಾದರೂ ಸಂಚಕಾರ ಒದಗಿ ಬಂದರೆ ಅದಕ್ಕೆ ಯಾರು ಹೊಣೆ?

ಕಳೆದ ವಾರ ಒಬ್ಬ ಯುವತಿಯ ವಿಷಯದಲ್ಲೂ ಲ್ಯಾಬ್ ಟೆಕ್ನಿಶಿಯನ್ ಗಳಿಂದ ಇಂತದ್ದೇ ಅಚಾತುರ್ಯ ನಡೆದಿತ್ತು. ಆಕೆಗೆ ಸೋಂಕಿಲ್ಲದಿದ್ದರೂ ಪಾಸಿಟಿವ್ ರಿಪೋರ್ಟ್​ ನೀಡಲಾಗಿತ್ತು. ಯುವತಿ ದೂರುಗಳನ್ನು ಸಲ್ಲಿಸದರೂ ಪ್ರಯೋಜನವಾಗಲಿಲ್ಲ.

ನೈಟ್ ಶಿಫ್ಟ್​ ನಲ್ಲಿ ಕೆಲಸ ಮಾಡುವ ಟೆಕ್ನಿಶಿಯನ್​​ಗಳು ಪಾನಮತ್ತರಾಗಿ ಕೆಲಸಕ್ಕೆ ಬರುವುದರಿಂದ ಪ್ರಮಾದಗಳು ಜರುಗುತ್ತಿವೆ ಎನ್ನುತ್ತಾರೆ ಪ್ರಯಾಣಿಕರು. ಏರಪೋರ್ಟ್​ ನಂಥ ಬಹುಮುಖ್ಯ ಸ್ಥಳದಲ್ಲಿ ಇಂಥ ಬೇಜವಾಬ್ದಾರಿ ಲ್ಯಾಬ್​​ ಗೆ ಹೊಣೆಗಾರಿಕೆ ವಹಿಸಿರುವುದು ಅಕ್ಷಮ್ಯ.

ಪ್ರಯಾಣಿಕರ ದೂರುಗಳಿಗೂ ಬೆಲೆ ಇಲ್ಲ ಅಂತಾದರೆ, ಕೇವಲ ಲ್ಯಾಬನ್ನು ಕಟಕಟೆಯಲ್ಲಿ ನಿಲ್ಲಿಸಲಾಗದು. ದೂರುಗಳನ್ನು ಅಸಡ್ಡೆ ಮಾಡುತ್ತಿರುವವರು ಸಹ ಅಷ್ಟೇ ತಪ್ಪಿತಸ್ಥರು.​​

ಇದನ್ನೂ ಓದಿ:   ವಿದೇಶಗಳಿಂದ ಬಂದವರಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆರ್​ಟಿಪಿಸಿಆರ್​ ಪರೀಕ್ಷೆ ಅಗತ್ಯವಿಲ್ಲ

Follow us