Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ ಸುಧಾಕರ್ ಅನುಭವಿ ನಾಯಕ ನಿಜ, ನನ್ನೊಂದಿಗೆ ಸೂಪರ್ ಸ್ಟಾರ್ ಶಾಸಕರಿದ್ದಾರೆ: ರಕ್ಷಾ ರಾಮಯ್ಯ, ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ

ಡಾ ಸುಧಾಕರ್ ಅನುಭವಿ ನಾಯಕ ನಿಜ, ನನ್ನೊಂದಿಗೆ ಸೂಪರ್ ಸ್ಟಾರ್ ಶಾಸಕರಿದ್ದಾರೆ: ರಕ್ಷಾ ರಾಮಯ್ಯ, ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 06, 2024 | 11:55 AM

ಸುಧಾಕರ್ ಅನುಭವಿ ರಾಜಕಾರಣಿಯಾಗಿರಬಹುದು, ಅದರೆ ತನ್ನ ಪರವಾಗಿ ಅನುಭವಿ ರಾಜಕಾರಣಿಗಳು ಪ್ರಚಾರ ಮಾಡುತ್ತಿದ್ದಾರೆ ಮತ್ತು ಅದಕ್ಕೂ ಮಿಗಿಲಾಗಿ ಸೂಪರ್ ಸ್ಟಾರ್ ಶಾಸಕರಿದ್ದಾರೆ ಎಂದರು. ಪ್ರದೀಪ್ ಈಶ್ವರ್ ಮತ್ತು ಎನ್ ಶ್ರೀನಿವಾಸ್ ಅವರನ್ನು ಕುರಿತು ರಕ್ಷಾ ರಾಮಯ್ಯ ಈ ಮಾತು ಹೇಳಿದರೇ?

ನೆಲಮಂಗಲ: ಇಂದು ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ (Nelamangala Assembly segment) ಚುನಾವಣಾ ಪ್ರಚಾರ ನಡೆಸುತ್ತಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ (Raksha Ramaiah) ಈ ಬಾರಿಯ ಚುನಾವಣೆಯಲ್ಲಿ ತಮ್ಮ ಪಕ್ಷ ಯುವಕರಿಗೆ ಆದ್ಯತೆ ನೀಡಿರುವುದನ್ನು ಸಮರ್ಥಿಸಿಕೊಂಡರು. ನಮ್ಮ ದೇಶದ ಜನಸಂಖ್ಯೆಯ ಶೇಕಡಾ 60ರಷ್ಟು ಜನ ಯುವಕರಿದ್ದಾರೆ, ಅವರಿಗೆ ಜವಾಬ್ದಾರಿಗಳನ್ನು ವಹಿಸಿದರೆ ಸವಾಲಾಗಿ ಸ್ವೀಕರಿಸಿ ಕೆಲಸಮಾಡುತ್ತಾರೆ, ಯುವಕರಲ್ಲಿ ಉತ್ಸಾಹ, ಹುರುಪು ಮತ್ತು ಸಾಧಿಸುವ ಛಲಕ್ಕೆ ಕೊರೆತೆಯಿಲ್ಲ, ನೆಲಮಂಗದ ಕ್ಷೇತ್ರವನ್ನೇ ತೆಗೆದುಕೊಳ್ಳಿ, ಯುವ ಶಾಸಕ ಎನ್ ಶೀನಿವಾಸ (n Srinivas) ಅದ್ಭುತವಾದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ರಕ್ಷಾ ರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರದಲ್ಲಿ ಅವರ ಪ್ರತಿಸ್ಪರ್ಧಿ ಡಾ ಕೆ ಸುಧಾಕರ್ ರಾಜಕಾರಣದಲ್ಲಿ ಅಪಾರ ಅನುಭವವುಳ್ಳ ನಾಯಕನಾಗಿರುವುದರಿಂದ ಚುನಾವಣೆ ಗೆಲ್ಲಲು ಸಮಸ್ಯೆಯಾಗಲಾರದೇ ಎಂದು ಕೇಳಿದ ಪ್ರಶ್ನೆಗೆ ಅವರು, ಅವರು ಅನುಭವಿ ರಾಜಕಾರಣಿಯಾಗಿರಬಹುದು, ಅದರೆ ತನ್ನ ಪರವಾಗಿ ಅನುಭವಿ ರಾಜಕಾರಣಿಗಳು ಪ್ರಚಾರ ಮಾಡುತ್ತಿದ್ದಾರೆ ಮತ್ತು ಅದಕ್ಕೂ ಮಿಗಿಲಾಗಿ ಸೂಪರ್ ಸ್ಟಾರ್ ಶಾಸಕರಿದ್ದಾರೆ ಎಂದರು. ಪ್ರದೀಪ್ ಈಶ್ವರ್ ಮತ್ತು ಎನ್ ಶ್ರೀನಿವಾಸ್ ಅವರನ್ನು ಕುರಿತು ರಕ್ಷಾ ರಾಮಯ್ಯ ಈ ಮಾತು ಹೇಳಿದರೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪ್ರದೀಪ್ ಈಶ್ವರ್​ರನ್ನು ಪರೋಕ್ಷವಾಗಿ ಅಯೋಗ್ಯ ಎಂದ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್