ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕುಮಾರಸ್ವಾಮಿಯವರು ರಾಕೇಶ್ ಸಿದ್ದರಾಮಯ್ಯ ಎಳೆತಂದಿದ್ದು ಮೂರ್ಖತನ: ಸಿದ್ದರಾಮಯ್ಯ

|

Updated on: May 25, 2024 | 2:22 PM

ಪೆನ್ ಡ್ರೈವ್ ಗಳನ್ನು ಹಂಚಿದ್ದು ರೇಪ್​ಕ್ಕಿಂತ ದೊಡ್ಡ ಅಪರಾಧ ಅಂತ ಕುಮಾರಸ್ವಾಮಿ ಹೇಳುತ್ತಾರೆ, ಭಾರತೀಯ ದಂಡಸಂಹಿತೆಯ ಯಾವ ಸೆಕ್ಷನ್ ಅಡಿಯಲ್ಲಿ ಅದು ರೇಪ್​ಕ್ಕಿಂತ ದೊಡ್ಡ ಅಪರಾಧ ಅಂತ ಅವರು ತಿಳಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು. ಹಾಗಂತ ಪೆನ್ ಡ್ರೈವ್ ಗಳನ್ನು ಹಂಚಿದ್ದು ಮತ್ತು ಮಹಿಳೆಯರ ಮುಖಗಳನ್ನು ಬ್ಲರ್ ಮಾಡದಿರುವುದು ಸರಿಯೆಂದು ತಾನು ಯಾವತ್ತೂ ಹೇಳಲ್ಲ, ಅದು ಖಂಡಿತವಾಗಿಯೂ ತಪ್ಪು ಎಂದು ಸಿದ್ದರಾಮಯ್ಯ ಹೇಳಿದರು.

ಮೈಸೂರು: ನಿನ್ನೆಯಂತೆಯೇ ನಗರದ ಮೈಲಾರಿ ಹೋಟಲ್​ನಲ್ಲಿ ತಿಂಡಿ ತಿಂದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಕೇಶ್ ಸಿದ್ದರಾಮಯ್ಯರನ್ನು (Rakesh Siddaramaiah) ಎಳೆತಂದಿರುವುದಕ್ಕೆ ಪ್ರತಿಕ್ರಿಯೆ ನೀಡಿದರು. ರಾಕೇಶ್ ಮರಣ ಹೊಂದಿದ್ದು 8 ವರ್ಷಗಳ ಹಿಂದೆ 2016ರಲ್ಲಿ. ರಾಕೇಶ್ ಮತ್ತು ಪ್ರಜ್ವಲ್ ಪ್ರಕರಣಗಳಲ್ಲಿ ಯಾವ ಸಾಮ್ಯತೆ ಇದೆ? ರಾಕೇಶ್ ಹೆಸರು ಉಲ್ಲೇಖಿಸುವುದು ಮೂರ್ಖತನ ಎಂದು ಸಿದ್ದರಾಮಯ್ಯ ಹೇಳಿದರು. ಪ್ರಜ್ವಲ್ ಮೇಲೆ ರೇಪ್ ಆರೋಪಗಳಿವೆ ಎಂದ ಸಿದ್ದರಾಮಯ್ಯ, ಪೆನ್ ಡ್ರೈವ್ ಗಳನ್ನು ಹಂಚಿದ್ದು ರೇಪ್​ಕ್ಕಿಂತ ದೊಡ್ಡ ಅಪರಾಧ ಅಂತ ಕುಮಾರಸ್ವಾಮಿ ಹೇಳುತ್ತಾರೆ, ಭಾರತೀಯ ದಂಡಸಂಹಿತೆಯ ಯಾವ ಸೆಕ್ಷನ್ ಅಡಿಯಲ್ಲಿ ಅದು ರೇಪ್​ಕ್ಕಿಂತ ದೊಡ್ಡ ಅಪರಾಧ ಅಂತ ಅವರು ತಿಳಿಸಬೇಕು ಎಂದು ಹೇಳಿದರು. ಹಾಗಂತ ಪೆನ್ ಡ್ರೈವ್ ಗಳನ್ನು ಹಂಚಿದ್ದು ಮತ್ತು ಮಹಿಳೆಯರ ಮುಖಗಳನ್ನು ಬ್ಲರ್ ಮಾಡದಿರುವುದು ಸರಿಯೆಂದು ತಾನು ಯಾವತ್ತೂ ಹೇಳಲ್ಲ, ಅದು ಖಂಡಿತವಾಗಿಯೂ ತಪ್ಪು ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ಪ್ರಕರಣದ ಜೊತೆ ಮತ್ತೊಮ್ಮೆ ರಾಕೇಶ್ ಸಿದ್ದರಾಮಯ್ಯ ಪ್ರಕರಣ ಥಳುಕು ಹಾಕಿದ ಕುಮಾರಸ್ವಾಮಿ