ಸೂಟ್​​ಕೇಸ್​​ ತಳಭಾಗದಲ್ಲಿತ್ತು 4.15 ಕೋಟಿ ರೂ ಗಾಂಜಾ: ಅಧಿಕಾರಿಗಳೇ ಶಾಕ್!

Updated on: Oct 26, 2025 | 6:21 PM

ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ 4.15 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬ್ಯಾಂಕಾಕ್‌ನಿಂದ ಆಗಮಿಸಿದ ಪ್ರಯಾಣಿಕನೊಬ್ಬ ಸೂಟ್‌ಕೇಸ್‌ನ ತಳಭಾಗದಲ್ಲಿ ಅಡಗಿಸಿಟ್ಟು ಗಾಂಜಾ ಸಾಗಿಸುತ್ತಿದ್ದ. ಡಿಆರ್‌ಐ ಅಧಿಕಾರಿಗಳು ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಇದು ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆ.

ಹೈದರಾಬಾದ್​​, ಅಕ್ಟೋಬರ್​ 26: ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಸುಮಾರು 4.15 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವಂತಹ ಘಟನೆ ನಡೆದಿದೆ. ಸೂಟ್​​ಕೇಸ್​​ನ ತಳಭಾಗದಲ್ಲಿ ಹೈಡ್ರೋಪೋನಿಕ್ ಗಾಂಜಾವನ್ನು ಅಡಿಗಿಸಿ ತರಲಾಗಿತ್ತು. ಬ್ಯಾಂಕಾಕ್‌ನಿಂದ ಆಗಮಿಸುತ್ತಿದ್ದ ಪ್ರಯಾಣಿಕನನ್ನು ಬಂಧಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.