ಡಿಸಿಸಿ ಬ್ಯಾಂಕ್ ಬೆನ್ನಲ್ಲೇ ಮತ್ತೊಂದು ಗದ್ದುಗೆಗೆ ಜಾರಕಿಹೊಳಿ-ಸವದಿ ಪೈಪೋಟಿ: ಬೆಂಬಲಿಗರ ಮಧ್ಯೆ ಫೈಟ್
ರಾಜ್ಯ ರಾಜಕಾರಣವೇ ಬೇರೆ, ಬೆಳಗಾವಿ ರಾಜಕಾರಣ ಕಾರಣವೇ ಬೇರೆ ಎನ್ನುವ ಮಾತಿದೆ. ಮೊನ್ನೆ ಅಷ್ಟೇ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಹಾಗೂ ಕತ್ತಿ ಕುಟುಂಬ ಜಿದ್ದಾಜಿದ್ದಿಗೆ ಬಿದ್ದಿತ್ತು. ಗೆಲುವಿಗಾಗಿ ಎರಡೂ ಕುಟುಂಬಗಳು ನಾನಾ ಕಸರತ್ತು ಮಾಡಿದ್ದವು. ಅಂತಿಮವಾಗಿ ಕತ್ತಿಗೆ ನಿರಾಸೆಯಾಗಿದ್ದು, ಜಾರಕಿಹೊಳಿ ಬ್ರದರ್ಸ್ ತಮ್ಮ ತಾಕತ್ತು ಏನೆಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಹಾಗೂ ರಮೇಶ್ ಜಾರಕಿಹೊಳಿ ನಡವೆ ಪೈಪೋಟಿ ನಡೆದಿದ್ದು, ಇಂದು (ಅಕ್ಟೋಬರ್ 26) ಮತದಾನ ವೇಳೆ ಎರಡು ಕಡೆ ಬೆಂಬಲಿಗರ ನಡುವೆ ವಾಗ್ವಾದ, ನೂಕು ನುಗ್ಗಲು ನಡೆದಿದೆ.
ಬೆಳಗಾವಿ, (ಅಕ್ಟೋಬರ್ 26): ರಾಜ್ಯ ರಾಜಕಾರಣವೇ ಬೇರೆ, ಬೆಳಗಾವಿ ರಾಜಕಾರಣ ಕಾರಣವೇ ಬೇರೆ ಎನ್ನುವ ಮಾತಿದೆ. ಮೊನ್ನೆ ಅಷ್ಟೇ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಹಾಗೂ ಕತ್ತಿ ಕುಟುಂಬ ಜಿದ್ದಾಜಿದ್ದಿಗೆ ಬಿದ್ದಿತ್ತು. ಗೆಲುವಿಗಾಗಿ ಎರಡೂ ಕುಟುಂಬಗಳು ನಾನಾ ಕಸರತ್ತು ಮಾಡಿದ್ದವು. ಅಂತಿಮವಾಗಿ ಕತ್ತಿಗೆ ನಿರಾಸೆಯಾಗಿದ್ದು, ಜಾರಕಿಹೊಳಿ ಬ್ರದರ್ಸ್ ತಮ್ಮ ತಾಕತ್ತು ಏನೆಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಹಾಗೂ ರಮೇಶ್ ಜಾರಕಿಹೊಳಿ ನಡವೆ ಪೈಪೋಟಿ ನಡೆದಿದ್ದು, ಇಂದು (ಅಕ್ಟೋಬರ್ 26) ಮತದಾನ ವೇಳೆ ಎರಡು ಕಡೆ ಬೆಂಬಲಿಗರ ನಡುವೆ ವಾಗ್ವಾದ, ನೂಕು ನುಗ್ಗಲು ನಡೆದಿದೆ.
Latest Videos
