ಕೆಮ್ಮಣ್ಣುಗುಂಡಿ ಪ್ರವಾಸಿತಾಣದಲ್ಲಿ ಎಣ್ಣೆ ಪಾರ್ಟಿ; ಪ್ರಶ್ನಿಸಿದ ಪ್ರವಾಸಿಗನಿಗೆ ಧಮ್ಕಿ ಹಾಕಿದ ಚಾಲಕ

|

Updated on: Jul 30, 2024 | 8:42 PM

ತರೀಕೆರೆ ತಾಲೂಕಿನ ಪ್ರಸಿದ್ದ ಕೆಮ್ಮಣ್ಣುಗುಂಡಿ ಪ್ರವಾಸಿತಾಣದಲ್ಲಿ ಪ್ರವಾಸಿಗರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಹೌದು, ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ತನಿಗೆಬೈಲು ವಲಯದಲ್ಲಿರುವ ಕೆಮ್ಮಣ್ಣುಗುಂಡಿಯಲ್ಲಿ ಮದ್ಯ ಸೇವನೆ ಮಾಡಿದ್ದು, ಇದಕ್ಕೆ ಸ್ಥಳೀಯ ಜೀಪ್ ಚಾಲಕ ಸಾರಥ್ಯವಹಿಸಿದ್ದಾರೆ. ಚಾಲಕ ಮಹೇಂದ್ರ ವಿರುದ್ಧ ಕ್ರಮಕ್ಕೆ ಸ್ಥಳೀಯ ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಚಿಕ್ಕಮಗಳೂರು, ಜು.30: ಮಳೆಗಾಲ ಬಂತೆಂದರೆ ಸಾಕು ಪ್ರಕೃತಿ ಪ್ರಿಯರು, ಹಚ್ಚ ಹಸಿರಿನಿಂದ ಕಂಗೊಳಿಸುವ ಪರಿಸರದ ಮಧ್ಯೆ ಕೆಲ ಸಮಯ ಕಳೆಯಲು ಮುಂದಾಗುತ್ತಾರೆ. ಆದರೆ, ಕೆಲ ಪ್ರವಾಸಿಗರು ಅದರ ಅಂಧವನ್ನು ಹಾಳು ಮಾಡಲು ಮುಂದಾಗಿದ್ದು, ಜಿಲ್ಲೆಯ ತರೀಕೆರೆ ತಾಲೂಕಿನ ಪ್ರಸಿದ್ದ ಕೆಮ್ಮಣ್ಣುಗುಂಡಿ ಪ್ರವಾಸಿತಾಣದಲ್ಲಿ ಪ್ರವಾಸಿಗರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಹೌದು, ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ತನಿಗೆಬೈಲು ವಲಯದಲ್ಲಿರುವ ಕೆಮ್ಮಣ್ಣುಗುಂಡಿಯಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ಇದಕ್ಕೆ ಸ್ಥಳೀಯ ಜೀಪ್ ಚಾಲಕ ಸಾರಥ್ಯವಹಿಸಿದ್ದಾರೆ.

ಪ್ರವಾಸಿಗರಿಗೆ ಎಣ್ಣೆ ಪಾರ್ಟಿಗೆ ಸ್ಥಳ ಮೀಸಲಿಟ್ಟ ಖಾಸಗಿ ಜೀಪ್ ಚಾಲಕ, ತನ್ನ ಜೀಪ್ ಮೂಲಕ ಕರೆತಂದು ಎಣ್ಣೆ ಪಾರ್ಟಿ ಮಾಡಿಸಿದ್ದಾನೆ. ಇದನ್ನು ವಿಡಿಯೋ ರೆಕಾರ್ಡ್ ಮಾಡಿದ ಪ್ರವಾಸಿಗರಿಗೆ ಜೀಪ್ ಚಾಲಕ ಧಮ್ಕಿ ಹಾಕಿದ್ದಾನೆ. ನಾನು ಅರಣ್ಯ ಇಲಾಖೆಯ ಸಿಬ್ಬಂದಿ ಒಂದು ವಿಡಿಯೋ ಮೊಬೈಲ್​ನಲ್ಲಿ ಇದ್ರೆ ಸರಿ ಇರಲ್ಲ ಎಂದು ಅವಾಜ್​ ಹಾಕಿದ್ದು, ಚಾಲಕ ಮಹೇಂದ್ರ ವಿರುದ್ಧ ಕ್ರಮಕ್ಕೆ ಸ್ಥಳೀಯ ಪರಿಸರ ಪ್ರೇಮಿಗಳ ಒತ್ತಾಯಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರವಾಸಿಗರ ಮೋಜುಮಸ್ತಿಗೆ ಇನ್ನಾದರೂ ಬ್ರೇಕ್​ ಬೀಳುತ್ತಾ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ