Viral Video: ಮೀನುಗಾರರ ಬಲೆಗೆ ಬಿದ್ದ 1,500 ಕೆಜಿ ತೂಕದ ಎರಡು ತಿಮಿಂಗಿಲ; ವಿಡಿಯೋ ಇಲ್ಲಿದೆ ನೋಡಿ
ಆಂಧ್ರಪ್ರದೇಶದ ವಿಶ್ವನಾಥಪಲ್ಲಿ ವೀರಬಾಬು ಎಂಬ ಸ್ಥಳೀಯ ಮೀನುಗಾರನ ಬಲೆಗೆ 1,500 ಕೆಜಿ ತೂಕದ ಎರಡು ತಿಮಿಂಗಿಲ ಸಿಕ್ಕಿಬಿದ್ದಿದೆ. ಅದರಲ್ಲಿ ಒಂದು ಸತ್ತಿದ್ದು, ಕ್ರೇನ್ ಮೂಲಕ ದಡಕ್ಕೆ ತರಲಾಗಿದೆ. ಜೀವಂತವಾಗಿದ್ದ ಮತ್ತೊಂದು ಮೀನನ್ನು ಮತ್ತೆ ಸಾಗರಕ್ಕೆ ಬಿಡಲಾಗಿದೆ ಎಂದು ವರದಿಯಾಗಿದೆ.
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣದ ಗಿಲಕಲದಿಂಡಿಯ ಕರಾವಳಿ ಕುಗ್ರಾಮದಲ್ಲಿ ಸುಮಾರು 1,500 ಕೆಜಿ ತೂಕದ ಎರಡು ತಿಮಿಂಗಿಲ ಶಾರ್ಕ್ ಮೀನುಗಾರರ ಬಲೆಗೆ ಸಿಕ್ಕಿಬಿದ್ದಿದೆ. ಬೃಹತ್ ಗ್ರಾತ್ರದ ಮೀನನ್ನು ದಡಕ್ಕೆ ತರಲು ಕ್ರೇನ್ ಅನ್ನು ಬಳಸಲಾಗಿದೆ. ಕ್ರೇನ್ ಮೂಲಕ ಮೀನನ್ನು ಹೊರತರುವ ದೃಶ್ಯವನ್ನು ಸ್ಥಳೀಯರು ಪೋನಿನಲ್ಲಿ ಸೆರೆಹಿಡಿದು, ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ತಿಮಿಂಗಿಲ ಶಾರ್ಕ್‌ಗಳನ್ನು ಸ್ಥಳೀಯವಾಗಿ ಚುಕ್ಕಾ ಸೊರ ಮೀನುಗಳು ಎಂದು ಕರೆಯಲಾಗುತ್ತದೆ. ವರದಿಗಳ ಪ್ರಕಾರ, ವಿಶ್ವನಾಥಪಲ್ಲಿ ವೀರಬಾಬು ಎಂಬ ಸ್ಥಳೀಯ ಮೀನುಗಾರನ ಬಲೆಗೆ ತಿಮಿಂಗಿಲ ಸಿಕ್ಕಿಬಿದ್ದಿದೆ. ಮೀನುಗಾರರು ಜೆಸಿಬಿ ಲೋಡರ್ ಸಹಾಯದಿಂದ ಬೃಹತ್ ತಿಮಿಂಗಿಲವನ್ನು ಹೊರತೆಗೆದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
VIDEO | Massive Whale Shark Accidentally Caught by Fishermen Near Machilipatnam in AP.
The enormous fish, an endangered species known as Rhincodon typus, became entangled in a large fishing net, leaving the fishermen with no option but to bring it ashore. #AndhraPradesh #Shark… pic.twitter.com/JEcQqg92MM
— Free Press Journal (@fpjindia) July 29, 2024
ಇದನ್ನೂ ಓದಿ: ವೃದ್ದೆಯನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಕೂರಿಸಿ ಹೊಳೆ ದಾಟಿ ಆಸ್ಪತ್ರೆಗೆ ಕರೆದುಕೊಂಡು ಬಂದ ವ್ಯಕ್ತಿ
ವಿಶ್ವನಾಥಪಲ್ಲಿ ವೀರಬಾಬು ಅವರ ಪ್ರಕಾರ, ಜುಲೈ 26, ಶುಕ್ರವಾರದಂದು ಎರಡು ಅಗಾಧ ಮೀನುಗಳನ್ನು ಅವರು ಮತ್ತು ಅವರ ತಂಡವು ಹಿಡಿದಿದ್ದು, ಅವುಗಳಲ್ಲಿ ಒಂದು ಸತ್ತಿದೆ. ಪರಿಣಾಮವಾಗಿ, ಜೀವಂತ ಮೀನನ್ನು ಮತ್ತೆ ಸಾಗರಕ್ಕೆ ಬಿಡಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Tue, 30 July 24