ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಬಸ್​ ಚಲಾಯಿಸಲು ಪರದಾಡಿದ ಚಾಲಕ

Edited By:

Updated on: Mar 12, 2025 | 10:19 PM

ಹಾಸನ ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಹಾಸನ, ಚನ್ನರಾಯಪಟ್ಟಣ, ಆಲೂರು, ಸಕಲೇಶಪುರ ಭಾಗಗಳಲ್ಲಿ ಮಳೆಯಾಗಿದ್ದು, ಬೇಸಿಗೆ ಬಿಸಿಲಿಗೆ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಇನ್ನು ಈ ವರ್ಷದ ಮೊದಲ ಮಳೆಗೆ ಜನರು ಸಹ ಫುಲ್ ಖುಷ್ ಆಗಿದ್ದಾರೆ. ಮತ್ತೊಂದೆಡೆ ಮಳೆ ನಡುವೆ ಸಾರಿಗೆ ಬಸ್‌ನಲ್ಲಿ ವೈಪರ್ ಇಲ್ಲದೆ ಚಾಲಕ ಪರದಾಡಿರುವ ಘಟನೆ ನಡೆದಿದೆ.

ಹಾಸನ, (ಮಾರ್ಚ್​ 12): ಹಾಸನದಲ್ಲಿಂದು ಸಂಜೆ ಭಾರೀ ಮಳೆಯಾಗಿದೆ. ಹಾಸನ, ಚನ್ನರಾಯಪಟ್ಟಣ, ಆಲೂರು, ಸಕಲೇಶಪುರ ಭಾಗದಲ್ಲಿ ಬಿರುಗಾಳಿ ಸಮೇತ ಮಳೆಯಾಗಿದೆ. ವರ್ಷದ ಮಳೆಗೆ ಜನರು ಫುಲ್ ಖುಷ್ ಆಗಿದ್ದರೆ, ಇನ್ನೊಂದೆಡೆ ಸಾರಿಗೆ ಬಸ್ ಚಾಲಕ  ಡ್ರೈವಿಂಗ್​ ಮಾಡಲು ಪರದಾಡಿರುವ ಘಟನೆ ನಡೆದಿದೆ. ಹಾಸನದಿಂದ ಬೆಂಗಳೂರಿಗೆ ತೆರಳುತ್ತಿರುವ ಸಾರಿಗೆ ಬಸ್​ನ ವೈಪರ್ ಇಲ್ಲದೇ ಚಾಲಕ ಮಳೆಯಲ್ಲಿ ಡ್ರೈವ್​ ಮಾಡಲು ಪರದಾಡಿದ್ದಾರೆ.

KA-18-F-0913 ನಂಬರ್‌ನ ಕೆಎಸ್‌ಆರ್‌ಟಿಸಿ ಬಸ್​ನಲ್ಲಿ ವೈಪರ್ ಆನ್​ ಆಗದಿದ್ದರಿಂದ ಡ್ರೈವರ್​ ಮಳೆಯಲ್ಲಿಯೇ ಕಷ್ಟಪಟ್ಟು ಚಲಾಯಿಸಿದ್ದಾರೆ. ರಸ್ತೆ ಕಾಣದಂತೆ ಮಳೆ ರಭಸವಾಗಿ ಬರುತ್ತಿದೆ. ಇದರಿಂದಬಸ್​ನೊಳಗಿದ್ದ ಪ್ರಯಾಣಿಕರು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಮಳೆಯಲ್ಲಿ ವೈಪರ್ ಇಲ್ಲದೇ ಬಸ್​ ಚಲಾಯಿಸುವ ವೇಳೆ ಏನಾದರೂ ಹೆಚ್ಚುಕಮ್ಮಿಯಾದರೆ ಯಾರು ಹೊಣೆ. ನಮ್ಮ ಟಿಕೆಟ್ ಹಣ ವಾಪಾಸ್ ಕೊಡಿ ಎಂದು ಪ್ರಯಾಣಿಕರು ಗಲಾಟೆ ಮಾಡಿದ್ದಾರೆ.

Loading...
Unable to load recommendations.
Follow Us
ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More