‘ನಮ್ಮ ಮಗನನ್ನು ನಮಗೆ ವಾಪಸ್ ಕೊಟ್ಟಿದ್ದೀರಿ’: ಡ್ರೋನ್ ಪ್ರತಾಪ್ ತಂದೆ-ತಾಯಿ ಭಾವುಕ
ಎಂಥ ಸಂದರ್ಭ ಬಂದರೂ ತಮ್ಮತನವನ್ನು ಡ್ರೋನ್ ಪ್ರತಾಪ್ ಅವರು ಬಿಟ್ಟುಕೊಟ್ಟಿಲ್ಲ. ಇಷ್ಟು ವರ್ಷಗಳ ಕಾಲ ಅವರು ತಂದೆ-ತಾಯಿಯಿಂದ ದೂರ ಇದ್ದರು. ಆದರೆ ಈ ವೇದಿಕೆಯಿಂದಾಗಿ ಅವರು ಪುನಃ ಪೋಷಕರ ಜೊತೆ ಬೆರೆತರು. ಅದನ್ನು ಫಿನಾಲೆ ವೇದಿಕೆಯಲ್ಲಿ ನೆನಪು ಮಾಡಿಕೊಂಡು ಅವರ ತಂದೆ-ತಾಯಿ ಭಾವುಕರಾಗಿದ್ದಾರೆ.
ಬಿಗ್ ಬಾಸ್ ಮನೆಗೆ ಬರುವುದಕ್ಕೂ ಮುನ್ನ ಡ್ರೋನ್ ಪ್ರತಾಪ್ (Drone Prathap) ಅವರ ಇಮೇಜ್ ಬೇರೆ ರೀತಿ ಇತ್ತು. ಅವರನ್ನು ಎಲ್ಲರೂ ಟ್ರೋಲ್ ಮಾಡುತ್ತಿದ್ದರು. ಆದರೆ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಅವರ ನಿಜವಾದ ವ್ಯಕ್ತಿತ್ವ ಏನು ಎಂಬುದು ಗೊತ್ತಾಯಿತು. ಯಾರಿಗೂ ಅವರು ಏಕವಚನದಲ್ಲಿ ಮಾತನಾಡಿಲ್ಲ. ಕೆಟ್ಟ ಪದಗಳ ಬಳಕೆ ಮಾಡಿಲ್ಲ. ಎಂಥ ಸಂದರ್ಭ ಬಂದರೂ ತಮ್ಮತನವನ್ನು ಅವರು ಬಿಟ್ಟುಕೊಟ್ಟಿಲ್ಲ. ಇಷ್ಟು ವರ್ಷಗಳ ಕಾಲ ಡ್ರೋನ್ ಪ್ರತಾಪ್ ಅವರು ತಂದೆ-ತಾಯಿಯಿಂದ ದೂರ ಇದ್ದರು. ಆದರೆ ಈ ವೇದಿಕೆಯಿಂದಾಗಿ ಅವರು ಪುನಃ ಪೋಷಕರ ಜೊತೆ ಬೆರೆತರು. ಅದನ್ನು ಫಿನಾಲೆ (BBK 10 Finale) ವೇದಿಕೆಯಲ್ಲಿ ನೆನಪು ಮಾಡಿಕೊಂಡು ಅವರ ತಂದೆ-ತಾಯಿ ಭಾವುಕರಾಗಿದ್ದಾರೆ. ಇಂದು (ಜನವರಿ 27) ಹಾಗೂ ನಾಳೆ (ಜನವರಿ 28) ‘ಕಲರ್ಸ್ ಕನ್ನಡ’ ಹಾಗೂ ‘ಜಿಯೋ ಸಿನಿಮಾ’ದಲ್ಲಿ ಸಂಜೆ 7.30ಕ್ಕೆ ಬಿಗ್ ಬಾಸ್ ಫಿನಾಲೆ ಪ್ರಸಾರ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ