Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸಹಜವಾದ ಇಂಡಿಯ ಮೈತ್ರಿಕೂಟ ಸಹಜ ಸಾವಿನತ್ತ ಸಾಗುತ್ತಿದೆ: ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ

ಅಸಹಜವಾದ ಇಂಡಿಯ ಮೈತ್ರಿಕೂಟ ಸಹಜ ಸಾವಿನತ್ತ ಸಾಗುತ್ತಿದೆ: ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 27, 2024 | 5:34 PM

ಆರ್​ಜೆಡಿ ಭ್ರಷ್ಟಾಚಾರ, ಪರಿವಾರವಾದ ಮತ್ತು ಸ್ವಜನಪಕ್ಷಾಪಾತಕ್ಕೆ ಹೆಸರಾಗಿರುವ ಪಕ್ಷ ಎಂದ ಜೋಶಿ, ನಿತೀಶ್ ಕುಮಾರ್ ಅವರೊಂದಿಗೆ ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ಈಗಲೇ ಮಾತಾಡುವುದು ಸರಿಯಲ್ಲ ಮತ್ತು ಅದರ ಬಗ್ಗೆ ಮಾತಾಡಲು ತಾನು ಸೂಕ್ತ ವ್ಯಕ್ತಿಯೂ ಅಲ್ಲ ಅಂತ ಹೇಳಿದರು.

ಬೆಂಗಳೂರು: ಇಂಡಿಯ ಮೈತ್ರಿಕೂಟದಲ್ಲಿ ನೀತಿ ಇಲ್ಲ, ನಿಯತ್ತಿಲ್ಲ ಮತ್ತು ನೇತೃತ್ವವೂ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಇಂಡಿಯ ಒಕ್ಕೂಟದ ರಚನೆಯೇ ಒಂದು ಅರ್ಥರಹಿರ ಕಸರತ್ತು, ದಕ್ಷಿಣದ ಡಿಎಂಕೆ (DMK) ಜೊತೆ, ಉತ್ತರದ ಸಮಾಜವಾದಿ ಪಕ್ಷ (Samajwadi Party) ಮತ್ತು ಆರ್ ಜೆ ಡಿ ಹೊಂದಾಣಿಕೆಯಾಗುವುದು ಸಾಧ್ಯವೇ? ಒಂದು ಅನೈಸರ್ಗಿಕ ಮತ್ತು ಅಸಹಜವಾದ ಒಕ್ಕೂಟ ಸಹಜ ಸಾವಿನತ್ತ ಸಾಗುತ್ತಿದೆ ಎಂದು ಜೋಶಿ ಹೇಳಿದರು. ಬಿಹಾರದಲ್ಲಿ ತಲೆದೋರಿರುವ ರಾಜಕೀಯ ತಲ್ಲಣದ ಬಗ್ಗೆ ಮಾತಾಡಿದ ಸಚಿವ, ಆರ್ ಜೆಡಿ ಪಕ್ಷದ ನಾಯಕರು ಮತ್ತು ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿವೆ ಅಂತ ತಮ್ಮ ಪಕ್ಷದ ಬಿಹಾರ ಸಂಸದರು ಮಾಹಿತಿ ನೀಡಿದ್ದಾರೆ.

ಲಾಲೂ ಪ್ರಸಾದ್ ಯಾದವ್ ಅವರ ಕುಟುಂಬದ ಬಗ್ಗೆ ಯಾರಿಗೆ ಗೊತ್ತಿಲ್ಲ? ಭ್ರಷ್ಟಾಚಾರ, ಪರಿವಾರವಾದ ಮತ್ತು ಸ್ವಜನಪಕ್ಷಾಪಾತಕ್ಕೆ ಹೆಸರಾಗಿರುವ ಪಕ್ಷ ಅದು ಎಂದ ಜೋಶಿ, ನಿತೀಶ್ ಕುಮಾರ್ ಅವರೊಂದಿಗೆ ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ಈಗಲೇ ಮಾತಾಡುವುದು ಸರಿಯಲ್ಲ ಮತ್ತು ಅದರ ಬಗ್ಗೆ ಮಾತಾಡಲು ತಾನು ಸೂಕ್ತ ವ್ಯಕ್ತಿಯೂ ಅಲ್ಲ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ