‘ನಮ್ಮ ಮಗನನ್ನು ನಮಗೆ ವಾಪಸ್​ ಕೊಟ್ಟಿದ್ದೀರಿ’: ಡ್ರೋನ್​ ಪ್ರತಾಪ್​ ತಂದೆ-ತಾಯಿ ಭಾವುಕ

‘ನಮ್ಮ ಮಗನನ್ನು ನಮಗೆ ವಾಪಸ್​ ಕೊಟ್ಟಿದ್ದೀರಿ’: ಡ್ರೋನ್​ ಪ್ರತಾಪ್​ ತಂದೆ-ತಾಯಿ ಭಾವುಕ

ಮದನ್​ ಕುಮಾರ್​
|

Updated on: Jan 27, 2024 | 7:30 PM

ಎಂಥ ಸಂದರ್ಭ ಬಂದರೂ ತಮ್ಮತನವನ್ನು ಡ್ರೋನ್​ ಪ್ರತಾಪ್​ ಅವರು ಬಿಟ್ಟುಕೊಟ್ಟಿಲ್ಲ. ಇಷ್ಟು ವರ್ಷಗಳ ಕಾಲ ಅವರು ತಂದೆ-ತಾಯಿಯಿಂದ ದೂರ ಇದ್ದರು. ಆದರೆ ಈ ವೇದಿಕೆಯಿಂದಾಗಿ ಅವರು ಪುನಃ ಪೋಷಕರ ಜೊತೆ ಬೆರೆತರು. ಅದನ್ನು ಫಿನಾಲೆ ವೇದಿಕೆಯಲ್ಲಿ ನೆನಪು ಮಾಡಿಕೊಂಡು ಅವರ ತಂದೆ-ತಾಯಿ ಭಾವುಕರಾಗಿದ್ದಾರೆ.

ಬಿಗ್​ ಬಾಸ್​ ಮನೆಗೆ ಬರುವುದಕ್ಕೂ ಮುನ್ನ ಡ್ರೋನ್​ ಪ್ರತಾಪ್​ (Drone Prathap) ಅವರ ಇಮೇಜ್​ ಬೇರೆ ರೀತಿ ಇತ್ತು. ಅವರನ್ನು ಎಲ್ಲರೂ ಟ್ರೋಲ್​ ಮಾಡುತ್ತಿದ್ದರು. ಆದರೆ ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ಅವರ ನಿಜವಾದ ವ್ಯಕ್ತಿತ್ವ ಏನು ಎಂಬುದು ಗೊತ್ತಾಯಿತು. ಯಾರಿಗೂ ಅವರು ಏಕವಚನದಲ್ಲಿ ಮಾತನಾಡಿಲ್ಲ. ಕೆಟ್ಟ ಪದಗಳ ಬಳಕೆ ಮಾಡಿಲ್ಲ. ಎಂಥ ಸಂದರ್ಭ ಬಂದರೂ ತಮ್ಮತನವನ್ನು ಅವರು ಬಿಟ್ಟುಕೊಟ್ಟಿಲ್ಲ. ಇಷ್ಟು ವರ್ಷಗಳ ಕಾಲ ಡ್ರೋನ್​ ಪ್ರತಾಪ್​ ಅವರು ತಂದೆ-ತಾಯಿಯಿಂದ ದೂರ ಇದ್ದರು. ಆದರೆ ಈ ವೇದಿಕೆಯಿಂದಾಗಿ ಅವರು ಪುನಃ ಪೋಷಕರ ಜೊತೆ ಬೆರೆತರು. ಅದನ್ನು ಫಿನಾಲೆ (BBK 10 Finale) ವೇದಿಕೆಯಲ್ಲಿ ನೆನಪು ಮಾಡಿಕೊಂಡು ಅವರ ತಂದೆ-ತಾಯಿ ಭಾವುಕರಾಗಿದ್ದಾರೆ. ಇಂದು (ಜನವರಿ 27) ಹಾಗೂ ನಾಳೆ (ಜನವರಿ 28) ‘ಕಲರ್ಸ್​ ಕನ್ನಡ’ ಹಾಗೂ ‘ಜಿಯೋ ಸಿನಿಮಾ’ದಲ್ಲಿ ಸಂಜೆ 7.30ಕ್ಕೆ ಬಿಗ್​ ಬಾಸ್​ ಫಿನಾಲೆ ಪ್ರಸಾರ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ