ಕಾರವಾರ: ಗ್ಯಾಸ್ ಸಿಲಿಂಡರ್ ಸಂಪರ್ಕ ಇಲ್ಲದೇ ಆರು ನಿಮಿಷ ಉರಿದ ಗ್ಯಾಸ್ ಸ್ಟವ್
ಇತ್ತೀಚೆಗೆ, ಹಸುವಿಗೆ ಆಹಾರ ನೀಡುವಾಗ ಕಾಂಪೌಂಡ್ ಮೇಲೆ ಆರಿದ್ದ ದೀಪವು ಹೊತ್ತಿ ಅಚ್ಚರಿ ಮೂಡಿಸಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ, ಗ್ಯಾಸ್ ಸಿಲಿಂಡರ್ ಸಂಪರ್ಕ ಇಲ್ಲದೇ 6 ನಿಮಿಷಗಳ ಕಾಲ ಗ್ಯಾಸ್ ಸ್ಟವ್ ಉರಿದು ಅಚ್ಚರಿ ಮೂಡಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜಮಖಂಡಿಯ ಅಲ್ಗೂರು ಬಸ್ತಿಯ ಮಸ್ಜಿದೇ ಅಬು ಹನೀಫಾ ಮಸೀದಿಯಲ್ಲಿ ನಡೆದಿದೆ. ಇದರ ವಿಡಿಯೋ ವೈರಲ್ ಆಗುತ್ತಿದೆ.
ಕಾರವಾರ, ಜ.27: ಹಸುವಿಗೆ ಆಹಾರ ನೀಡುವಾಗ ಕಾಂಪೌಂಡ್ ಮೇಲೆ ಆರಿದ್ದ ದೀಪವು ಹೊತ್ತಿ ಅಚ್ಚರಿ ಮೂಡಿಸಿದ್ದ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ, ಗ್ಯಾಸ್ ಸಿಲಿಂಡರ್ ಸಂಪರ್ಕ ಇಲ್ಲದೇ ಆರು ನಿಮಿಷಗಳ ಕಾಲ ಗ್ಯಾಸ್ ಸ್ಟವ್ ಉರಿದ ವಿಚಿತ್ರ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಜಮಖಂಡಿಯ ಅಲ್ಗೂರು ಬಸ್ತಿಯ ಮಸ್ಜಿದೇ ಅಬು ಹನೀಫಾ ಮಸೀದಿಯಲ್ಲಿ ನಡೆದಿದೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ.
ದಾಂಡೇಲಿಯ ಜಮಾಅತ್‌ನಿಂದ ರಿಯಾಝ್, ಮಹಮ್ಮದ್ ಗೌಸ್ ಮುಂತಾದವರು ಧರ್ಮ ಪ್ರಚಾರದ ಹಿನ್ನೆಲೆ ಜಮಖಂಡಿಗೆ ತೆರಳಿದ್ದರು. ಕಳೆದ ಬುಧವಾರ ಮಸೀದಿಯಲ್ಲಿ ನಮಾಜ್ ಮಾಡುವ ಮುಂಚೆ ಮುಂಜಾನೆ ಚಹಾ ತಯಾರಿಸುವ ಸಮಯದಲ್ಲಿ ಗ್ಯಾಸ್ ಉರಿಸಲಾಗಿತ್ತು. ಆ ವೇಳೆ ಸಿಲಿಂಡರ್‌ನಲ್ಲಿ ಗ್ಯಾಸ್ ಖಾಲಿ ಆಗಿರುವುದು ಗಮನಕ್ಕೆ ಬಂದಿದೆ.
ಇದನ್ನೂ ಓದಿ: ರಾಮಲಲ್ಲಾ ಪ್ರತಿಷ್ಟಾಪನೆ ದಿನ ಮಸಿದಿ ಕೆಡವುವ ಸಂಕಲ್ಪ: ಸಂಸದ ಅನಂತ ಕುಮಾರ ಹೆಗಡೆ ಹೇಳಿಕೆ ವೈರಲ್
ತಕ್ಷಣ ಗ್ಯಾಸ್ ಸಿಲಿಂಡರ್ ಬದಲಾಯಿಸಲು ರೆಗ್ಯುಲೇಟರ್ ಕೂಡಾ ತೆಗೆದಿದ್ದರು. ಆದರೆ, ಬೇರೆ ಸಿಲಿಂಡರ್ ಸಂಪರ್ಕ ಮಾಡುವ ಮುನ್ನ ಸ್ಟವ್‌ನಲ್ಲಿ ಬೆಂಕಿ ಉರಿಯುವುದು ಮುಂದುವರಿದಿದೆ. ಗ್ಯಾಸ್ ಸಂಪರ್ಕ ಇಲ್ಲದೇ ಉರಿಯುತ್ತಿರುವ ಬೆಂಕಿಯನ್ನು ಕಂಡು ಜನರು ಆಶ್ಚರ್ಯಪಟ್ಟರು. ತಕ್ಷಣವೇ ಮಸೀದಿಯಲ್ಲಿದ್ದ ರಿಯಾಝ್ ತಮ್ಮ ಮೊಬೈಲಿನಲ್ಲಿ ದೃಶ್ಯವನ್ನು ಸುಮಾರು ನಾಲ್ಕು ನಿಮಿಷಗಳವರೆಗೆ ಸೆರೆಹಿಡಿದಿದ್ದಾರೆ. ಸ್ಟವ್ ಬಟನ್ ಬಂದ್ ಮಾಡಿದರೂ ಆರದ ಬೆಂಕಿಯನ್ನು ಬಾಯಿಂದ ಊದಿ ಆರಿಸಿದ್ದರು ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ