ಕುಡಿದ ನಶೆಯಲ್ಲಿ ಕೆರೆಯಲ್ಲಿರುವ ಮೊಸಳೆ ಹಿಡಿಯಲು ಹೋದ ಭೂಪ
ಕುಡಿದ ನಶೆಯಲ್ಲಿ ಕೆರೆಗೆ ಹಾರಿದ ವ್ಯಕ್ತಿ

ಕುಡಿದ ನಶೆಯಲ್ಲಿ ಕೆರೆಯಲ್ಲಿರುವ ಮೊಸಳೆ ಹಿಡಿಯಲು ಹೋದ ಭೂಪ

| Updated By: ವಿವೇಕ ಬಿರಾದಾರ

Updated on: Oct 07, 2022 | 4:53 PM

ಬಾಗಲಕೋಟೆ ತಾಲೂಕಿನ ಹೊಸ ಮುರನಾಳದಲ್ಲಿ ಮೌಲಾಸಾಬ ವಾಲೀಕಾರ್ ಎಂಬ ವ್ಯಕ್ತಿ ಕುಡಿದ ನಶೆಯಲ್ಲಿ ಮೊಸಳೆ ಹಿಡಿಯಲು ಕೆರೆಗೆ ಧುಮುಕಿದ್ದಾನೆ.

ಮೀನು ಹಿಡಿಯುವವರನ್ನು ನೋಡಿದ್ದೇವೆ, ಆದರೆ ಇಲ್ಲೊಬ್ಬ ಕುಡಿದ ನಶೆಯಲ್ಲಿ ಕೆರೆಯಲ್ಲಿರುವ ಮೊಸಳೆ ಹಿಡಿಯಲು ಹೋಗಿದ್ದಾನೆ. ಬಾಗಲಕೋಟೆ ತಾಲೂಕಿನ ಹೊಸ ಮುರನಾಳದಲ್ಲಿ ಮೌಲಾಸಾಬ ವಾಲೀಕಾರ್ ಎಂಬ ವ್ಯಕ್ತಿ ಕುಡಿದ ನಶೆಯಲ್ಲಿ ಮೊಸಳೆ ಹಿಡಿಯಲು ಕೆರೆಗೆ ಧುಮುಕಿದ್ದಾನೆ. ಆದರೆ ಅವನಿಗೆ ಈಜು ಬರುತ್ತಿರಲಿಲ್ಲ, ಹೀಗಾಗಿ ಈಜಲು ಆಗದೇ ಮುಳುಗುತ್ತಿದ್ದನು. ಆಗ ಗ್ರಾಮಸ್ಥ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಮೊಸಳೆ ಕಳೆದ ನಾಲ್ಕೈದು ದಿನಗಳಿಂದ ಗ್ರಾಮದ ಕೆರೆಯಲ್ಲಿದೆ. ಮೊಸಳೆಯನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದಾರೆ.