ಎಣ್ಣೆ ಮತ್ತಿನಲ್ಲಿ ವ್ಯಕ್ತಿಯ ಚಲ್ಲಾಟ, ವಾಹನ ಸವಾರರ ಪರದಾಟ; ಮಧ್ಯ ರಾತ್ರಿ ರಸ್ತೆ ಮೇಲೆ ಕುಡುಕನ ನಿದ್ರೆ
ಮಧ್ಯ ರಾತ್ರಿ ರಸ್ತೆ ಮದ್ಯೆ ಮಲಗಿದ್ದ ವ್ಯಕ್ತಿ ಕಂಡು ಕೆಲ ವಾಹನ ಸವಾರರು ಬೆಚ್ಚಿಬಿದ್ದ ಘಟನೆಯೂ ನಡೆದಿದೆ. ಕೆಲ ಹೊತ್ತು ರಸ್ತೆಯಲ್ಲಿ ಎದ್ದು ನಿಂತು ಮತ್ತೆ ಅದೇ ಜಾಗದಲ್ಲಿ ಮಲಗಿ ಕುಟುಕ ವ್ಯಕ್ತಿ ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡಿದ್ದ. ಎಣ್ಣೆ ಮತ್ತಿನಲ್ಲಿ ವ್ಯಕ್ತಿಯ ಚಲ್ಲಾಟಕ್ಕೆ ವಾಹನ ಸವಾರರು ಪರದಾಡುವಂತಾಗಿತ್ತು.
ಚಿಕ್ಕಮಗಳೂರು, ಜ.11: ವ್ಯಕ್ತಿಯೋರ್ವ ಕಂಠಪೂರ್ತಿ ಕುಡಿದು ರಸ್ತೆಯ ಮಧ್ಯೆ ನಿದ್ರೆಗೆ ಜಾರಿದ ಘಟನೆ ನಡೆದಿದ್ದು ಇದರಿಂದ ವಾಹನ ಸವಾರರಿಗೆ ಕಿರಿಕಿರಿಯಾಗಿದೆ. ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆಯ ಜನ್ನಾಪುರ ಬಳಿಯ ಹಳಸೆ ಗ್ರಾಮದ ಬಳಿ ವ್ಯಕ್ತಿಯೋರ್ವ ಕಂಠಪೂರ್ತಿ ಕುಡಿದು ರಸ್ತೆಯಲ್ಲೇ ಮಲಗಿದ್ದಾರೆ. ವಾಹನ ಚಾಲಕರು ಎಷ್ಟೇ ಹಾರ್ನ್ ಮಾಡಿದರು ಮೇಲಕ್ಕೇಳದೆ ರಸ್ತೆ ಮಧ್ಯೆ ಮಲಗಿದ್ದಾರೆ. ಮಧ್ಯ ರಾತ್ರಿ ರಸ್ತೆ ಮದ್ಯೆ ಮಲಗಿದ್ದ ವ್ಯಕ್ತಿ ಕಂಡು ಕೆಲ ವಾಹನ ಸವಾರರು ಬೆಚ್ಚಿಬಿದ್ದ ಘಟನೆಯೂ ನಡೆದಿದೆ. ಕೆಲ ಹೊತ್ತು ರಸ್ತೆಯಲ್ಲಿ ಎದ್ದು ನಿಂತು ಮತ್ತೆ ಅದೇ ಜಾಗದಲ್ಲಿ ಮಲಗಿ ಕುಟುಕ ವ್ಯಕ್ತಿ ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡಿದ್ದ. ಎಣ್ಣೆ ಮತ್ತಿನಲ್ಲಿ ವ್ಯಕ್ತಿಯ ಚಲ್ಲಾಟಕ್ಕೆ ವಾಹನ ಸವಾರರು ಪರದಾಡುವಂತಾಗಿತ್ತು.
ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ