ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಿನಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಮದ್ಯ ಖರೀದಿಸುವಾಗ ಮದ್ಯದಂಗಡಿಯ ಕಬ್ಬಿಣದ ಗ್ರಿಲ್‌ನಲ್ಲಿ ಕುಡುಕನ ತಲೆ ಸಿಲುಕಿಕೊಂಡು ಆತ ಪರದಾಡಿದ ಘಟನೆ ನಡೆದಿದೆ. ಸತತ ಪ್ರಯತ್ನದ ನಂತರ ಆತನ ತಲೆಯನ್ನು ಹೊರಗೆ ಎಳೆಯಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ತಮಾಷೆಯ ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಹೆಸರಿಲ್ಲದ ಕುಡುಕ ವ್ಯಕ್ತಿಯೊಬ್ಬರ ಮದ್ಯದ ಬಾಟಲಿಯನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾ ಮದ್ಯದಂಗಡಿಯ ಕಬ್ಬಿಣದ ಗ್ರಿಲ್‌ನಲ್ಲಿ ಸಿಲುಕಿಕೊಂಡಿರುವುದನ್ನು ತೋರಿಸಲಾಗಿದೆ.
ನವದೆಹಲಿ, ಜುಲೈ 11: ಕುಡುಕನೊಬ್ಬ ಆಲ್ಕೋಹಾಲ್ ಆಸೆಯಿಂದ ಮದ್ಯದಂಗಡಿಯ ಕಿಟಕಿಯಲ್ಲಿ ಕೈಹಾಕಿ ಸಾರಾಯಿ ಬಾಟಲಿ ಕದಿಯಲು ಪ್ರಯತ್ನಿಸಿದ್ದಾನೆ. ಆಲ್ಕೋಹಾಲ್ ಬಾಟಲಿಯನ್ನು ಹಿಡಿದ ಆತ ಲಿಕ್ಕರ್ ಶಾಪ್ನ ಕಿಟಕಿಯ ಸರಳಿನ ನಡುವೆ ಸಿಲುಕಿದ್ದಾನೆ. ಈ ತಮಾಷೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆ ಕುಡುಕ ಯಾರು, ಇದು ಎಲ್ಲಿ ನಡೆದ ಘಟನೆ ಎಂಬುದು ತಿಳಿದಿಲ್ಲ. ಸುತ್ತಮುತ್ತಲಿನವರ ಸತತ ಪ್ರಯತ್ನದ ನಂತರ ಆತನ ಕುತ್ತಿಗೆಯನ್ನು ಸರಳಿನ ಮಧ್ಯದಿಂದ ಬಿಡಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ