ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ; ಕ್ವಿಂಟಾಲ್​​ಗೆ ರೇಟ್​​ ಎಷ್ಟು ಗೊತ್ತಾ?

Updated on: Apr 10, 2026 | 12:55 PM

ತೆಂಗು ಬೆಳೆಗಾರರಿಗೆ ಇದೊಂದು ಸಂತಸದ ಸುದ್ದಿ. ಕೊಬ್ಬರಿ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿ, ಒಂದು ಕ್ವಿಂಟಾಲ್ ದರ 32,000 ತಲುಪಿದೆ. ನುಸಿಪೀಡೆ ಹಾಗೂ ಕಾಯಿಲೆಗಳಿಂದ ತತ್ತರಿಸಿದ್ದ ರೈತರಿಗೆ ಇದು ಆರ್ಥಿಕ ಚೇತರಿಕೆ ತಂದಿದೆ. ಕಡಿಮೆ ಇಳುವರಿ ಮತ್ತು ದಾಸ್ತಾನು ಕೊರತೆಯಿಂದ ಬೆಲೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಕೊಬ್ಬರಿ ಎಣ್ಣೆ ಬೆಲೆಯೂ ದುಪ್ಪಟ್ಟಾಗಿದೆ.

ಬೆಂಗಳೂರು, ಏಪ್ರಿಲ್​​ 10: ಕೊಬ್ಬರಿ ಬೆಲೆ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದ್ದು, ಒಂದು ಕ್ವಿಂಟಾಲ್ ಕೊಬ್ಬರಿ ದರ ಸುಮಾರು 32 ಸಾವಿರ ರೂಪಾಯಿಗೆ ತಲುಪಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಕ್ವಿಂಟಾಲ್‌ಗೆ 8 ರಿಂದ 10 ರೂಪಾಯಿ ಹೆಚ್ಚಳವಾಗಿದೆ. ನುಸಿಪೀಡೆ ಮತ್ತು ವಿವಿಧ ರೋಗಗಳಿಂದ ತೀವ್ರ ತೊಂದರೆ ಅನುಭವಿಸಿದ್ದ ರೈತರಿಗೆ ಈ ಬೆಲೆ ಏರಿಕೆ ಸಂತಸ ತಂದಿದೆ. ಪ್ರಸ್ತುತ ಕೊಬ್ಬರಿ ದಾಸ್ತಾನು ಯಾರ ಬಳಿ ಇದೆ ಎಂಬುದು ಒಂದು ಪ್ರಶ್ನೆಯಾಗಿದ್ದು, ಸಣ್ಣ ರೈತರು ತಮ್ಮ ಉತ್ಪನ್ನವನ್ನು ಬೇಗನೆ ಮಾರಾಟ ಮಾಡಿದ್ದಾರೆ. ಈ ವರ್ಷ ಇಳುವರಿ ಕಡಿಮೆ ಇದ್ದು, ಮಾರುಕಟ್ಟೆಯಲ್ಲಿ ಕೊಬ್ಬರಿ ಸಂಗ್ರಹವೂ ಕಡಿಮೆಯಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಕಡಿಮೆ ಇಳುವರಿಯೇ ಪ್ರಸ್ತುತ ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದು ಅವರು ಹೇಳಿದ್ದಾರೆ. ಬೆಲೆ ಇನ್ನೆಷ್ಟು ಏರಬಹುದು ಎಂಬುದರ ಬಗ್ಗೆ ಅಧಿಕಾರಿಗಳಿಗೂ ನಿಖರ ಅಂದಾಜು ಇಲ್ಲ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More