PM Modi Birthday: ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೂ ಪ್ರಧಾನಿ ಮೋದಿ ಫೋಟೋ!

Updated on: Sep 17, 2025 | 11:11 PM

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಇಂದು ರಾತ್ರಿ ದುಬೈನ ಬುರ್ಜ್ ಖಲೀಫಾ ಮೋದಿಯವರ ಫೋಟೋಗಳಿಂದ ಬೆಳಗಿತು. ವಿಶ್ವದ ಅತಿ ಎತ್ತರದ ಕಟ್ಟಡದಲ್ಲಿ ಮೋದಿ ಅವರ ಫೋಟೋಗಳನ್ನು ಪ್ರದರ್ಶಿಸಲಾಗಿದ್ದು, ಇಂದು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದರು.

ದುಬೈ, ಸೆಪ್ಟೆಂಬರ್ 17: ಭಾರತದ ಪ್ರಧಾನಿ ನರೇಂದ್ರ ಮೋದಿ (PM Modi Birthday) ಅವರ 75ನೇ ಹುಟ್ಟುಹಬ್ಬದ ಶುಭಾಶಯ ಕೋರಲು ದುಬೈನಲ್ಲಿರುವ ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ದೀಪಗಳಿಂದ ಬೆಳಗಿತು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಇಂದು ರಾತ್ರಿ ದುಬೈನ ಬುರ್ಜ್ ಖಲೀಫಾ ಮೋದಿಯವರ ಫೋಟೋಗಳಿಂದ ಬೆಳಗಿತು. ವಿಶ್ವದ ಅತಿ ಎತ್ತರದ ಕಟ್ಟಡದಲ್ಲಿ ಮೋದಿ ಅವರ ಫೋಟೋಗಳನ್ನು ಪ್ರದರ್ಶಿಸಲಾಗಿದ್ದು, ‘ಜನ್ಮದಿನದ ಶುಭಾಶಯಗಳು’ (ಹ್ಯಾಪಿ ಬರ್ತಡೇ) ಎಂಬ ಪದಗಳೊಂದಿಗೆ ಬಣ್ಣ ಬಣ್ಣದ ಲೈಟ್​​ಗಳನ್ನು ಬೆಳಗಿಸಲಾಯಿತು. ಹಾಗೇ, ಈ ವೇಳೆ ಭಾರತೀಯ ಧ್ವಜದ ಬಣ್ಣಗಳಾದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣವನ್ನು ಬುರ್ಜ್ ಖಲೀಫಾ ಮೇಲೆ ಪ್ರದರ್ಶಿಸಲಾಯಿತು. ಇದು ಭಾರತದ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ.

ಇಂದು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದರು. “ನರೇಂದ್ರ ಮೋದಿಯವರೇ, ನಿಮ್ಮ ಹುಟ್ಟುಹಬ್ಬದಂದು ಹೃತ್ಪೂರ್ವಕವಾಗಿ ಶುಭಾಶಯಗಳನ್ನು ತಿಳಿಸುತ್ತೇನೆ. ನೀವು ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಮುಂದುವರಿಸಬೇಕೆಂದು ನಾನು ಬಯಸುತ್ತೇನೆ. ಭಾರತದ ಪ್ರಗತಿ ಮತ್ತು ಭಾರತೀಯರ ಸಮೃದ್ಧಿಯನ್ನು ಮುನ್ನಡೆಸುವಲ್ಲಿ ನಿಮ್ಮ ನಿರಂತರ ಯಶಸ್ಸನ್ನು ಬಯಸುತ್ತೇನೆ” ಎಂದು ಯುಎಇ ಅಧ್ಯಕ್ಷ ಪೋಸ್ಟ್‌ ಮಾಡಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Sep 17, 2025 11:08 PM