ಏರ್ಪೋರ್ಟ್ ಅಧಿಕಾರಿಗಳ ಕಣ್ತಪ್ಪಿಸಿ ದುಬೈ ಕರೆನ್ಸಿ ಸಾಗಾಟ: ಪ್ರಯಾಣಿಕನ ಖತರ್ನಾಕ್ ಐಡಿಯಾ ಹೇಗಿದೆ ನೋಡಿ
ಪ್ರಯಾಣಿಕನೊಬ್ಬ ಏರ್ಪೋರ್ಟ್ ಅಧಿಕಾರಿಗಳ ಕಣ್ತಪ್ಪಿಸಿ ಹಣ ಸಾಗಿಸುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವಂತಹ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿ: ಪ್ರಯಾಣಿಕನೊಬ್ಬ ಏರ್ಪೋರ್ಟ್ ಅಧಿಕಾರಿಗಳ ಕಣ್ತಪ್ಪಿಸಿ ಹಣ (Dubai currency) ಸಾಗಿಸುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವಂತಹ ಘಟನೆ ದೆಹಲಿಯಲ್ಲಿ ನಡೆದಿದೆ. ದುಬೈನಿಂದ ದೆಹಲಿಗೆ ಆಗಮಿಸಿದ ಪ್ರಯಾಣಿಕನ ಬ್ಯಾಗ್ನಲ್ಲಿ ಬರೋಬ್ಬರಿ 40,500 ಸೌದಿ ರಿಯಲ್ಸ್ ಅಂದ್ರೆ 8.5 ಲಕ್ಷ ರೂಪಾಯಿ ಅಡಗಿಸಿ ಸಾಗಿಸುತ್ತಿದ್ದ. ಇಂದಿರಾಗಾಂಧಿ ಏರ್ಪೋರ್ಟ್ನಲ್ಲಿ ಪ್ರಯಾಣಿಕರನ್ನು ಏರ್ಪೋರ್ಟ್ ಗುಪ್ತಚರ ಇಲಾಖೆ ಮತ್ತು ಸಿಐಎಸ್ಎಫ್ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಪ್ರಯಾಣಿಕನ ಖತರ್ನಾಕ್ ಐಡಿಯಾ ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 10, 2022 09:44 PM