ಮಳೆ ಆರ್ಭಟಕ್ಕೆ ತುಂಬಿದ ಇತಿಹಾಸ ಪ್ರಸಿದ್ಧ ಕೆರೆ; ಕೋಡಿ ಬಿದ್ದಿದ್ದಕ್ಕೆ ರೈತರು ಫುಲ್ ಖುಷ್, ಅಯ್ಯನಕೆರೆ ನೋಡಲು ಪ್ರವಾಸಿಗರ ದಂಡು
ಕೂಲ್ ಕೂಲ್ ವೆದರ್.. ಸುತ್ತಲೂ ಬೆಟ್ಟ, ಗುಡ್ಡ.. ನಡುವಲ್ಲಿ ನೀರು.. ಜೊತೆಯಲ್ಲಿ ಫ್ರೆಂಡ್ಸ್.. ವ್ಹಾವ್, ನಿಜಕ್ಕೂ ಇಂತಹ ಜಾಗದಲ್ಲಿ ಕಾಲ ಕಳೆಯೋದೇ ಚೆಂದಾ.. ಅದ್ರಲ್ಲೂ ಜೊತೆಯಲ್ಲಿ ಫ್ರೆಂಡ್ಸ್ ಇದ್ರೆ ಮುಗೀತ್.. ಇಡೀ ದಿನ ಎಂಜಾಯ್ ಮಾಡಬಹುದು.. ಇಲ್ಲೂ ಅಷ್ಟೇ.. ಪ್ರವಾಸಿಗರು ಖುಷಿಯಿಂದ ಕಾಲ ಕಳೀತಿದ್ದಾರೆ..
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಇತಿಹಾಸ ಪ್ರಸಿದ್ಧ ಅಯ್ಯನಕೆರೆಯಲ್ಲಿ ಕೋಡಿ ಬಿದ್ದಿದೆ. ಮಳೆಗಾಲದಲ್ಲೇ ಈ ಕೆರೆ ಕೋಡಿ ಬೀಳೋದು ತುಂಬಾನೇ ಅಪರೂಪ. ಕಳೆದ ಎರಡ್ಮೂರು ವರ್ಷಗಳಿಂದ ಈ ಅಯ್ಯನಕೆರೆ ತುಂಬಿದ್ದು ಬಿಟ್ರೆ ಅದೆಷ್ಟೋ ವರ್ಷಗಳು ಈ ಕೆರೆ ತುಂಬಿಲ್ಲ. 2036 ಹೆಕ್ಟೇರ್ ಪ್ರದೇಶಗಳಲ್ಲಿ ವಿಶಾಲವಾಗಿ ಹರಡಿಕೊಂಡಿರೋ ಅಯ್ಯನಕೆರೆ, 5 ಸಾವಿರದಿಂದ 6 ಸಾವಿರ ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಕಲ್ಪಿಸೋ ಜೀವನಾಡಿ. ಇಂತಹ ಕೆರೆ ಈಗ ಕೋಡಿ ಬಿದ್ದಿದೆ. ಹೀಗಾಗಿ ಪ್ರವಾಸಿಗರು ಕೆರೆ ಬಳಿ ಆಗಮಿಸಿ ಕಾಲ ಕಳೀತಿದ್ದಾರೆ. ನೀರಿನಲ್ಲಿ ಆಟ ಆಡಿ ಎಂಜಾಯ್ ಮಾಡ್ತಿದ್ದಾರೆ. ಸೆಲ್ಫಿಗೆ ಪೋಸ್ ಕೊಟ್ಟು ಖುಷಿಯಾಗ್ತಿದ್ದಾರೆ.
ಇನ್ನು, ಇಲ್ಲಿ ಹರಿಯೋ ನೀರು ಕಡೂರಿನ ಬಹುತೇಕ ಭಾಗಕ್ಕೆ ಕುಡಿಯೋ ನೀರಿನ ಸೌಲಭ್ಯ ಕಲ್ಪಿಸಿದೆ. ಇಲ್ಲಿನ ಊರು ಕಾಲುವೆ, ಬಸವನ ಕಾಲುವೆ, ಕಡೇ ಕಾಲುವೆ, ಗೌರಿ ಹಳ್ಳಿ ನಾಲ್ಕು ಕಾಲುವೆಗಳಾಗಿ ಹರಿಯೋ ನೀರು ಲಕ್ಷಾಂತರ ಜನರಿಗೆ ಬದುಕುವ ಚೈತನ್ಯ ತಂದಿದೆ. ಸದ್ಯ ಏಳು ಗುಡ್ಡಗಳ ಮಧ್ಯೆ ಇರೋ ಈ ಕೆರೆಯ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ. ಹಸಿರ ನೀರಿನ ಸೌಂದರ್ಯವನ್ನ ಸವಿಯಲು ಪ್ರವಾಸಿಗರ ದಂಡೇ ಹರಿದು ಬರ್ತಿದೆ. ಚಂದ್ರದ್ರೋಣ ಪರ್ವತ ಶ್ರೇಣಿಗೆ ಭೇಟಿ ನೀಡೋ ಪ್ರವಾಸಿಗರು ಅಯ್ಯನಕೆರೆಗೂ ವಿಸಿಟ್ ಕೊಡ್ತಿದ್ದಾರೆ. ಇಷ್ಟೇ ಅಲ್ಲ, ಅಯ್ಯನ ಕೆರೆ ತುಂಬಿರೋದ್ರಿಂದ ರೈತರು ಕೂಡ ಖುಷಿಯಾಗಿದ್ದಾರೆ.