ಧಾರಾಕಾರ ಮಳೆಗೆ ತತ್ತರಿಸಿದ ಶಹಾಪುರ: ಸಗರ ಗ್ರಾಮದಲ್ಲಿ ಹಳ್ಳದಂತಾದ ರಸ್ತೆಗಳು

Updated By: ಪ್ರಸನ್ನ ಹೆಗಡೆ

Updated on: Oct 27, 2025 | 11:26 AM

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಾದ್ಯಂತ ವರುಣ ಅಬ್ಬರಿಸಿದ್ದಾನೆ. ನಿರಂತರ ಮಳೆಯಿಂದಾಗಿ ಸಗರ ಗ್ರಾಮದಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ರಸ್ತೆಯಲ್ಲೇ ಹಳ್ಳದ ರೀತಿ ಮಳೆ ನೀರು ಹರಿದಿದೆ. ಕೆಲ ಮನೆಗಳು ಮತ್ತು ಅಂಗಡಿಗೂ ಕೊಳಚೆ ನೀರು ಪ್ರವೇಶಿಸಿದ ಕಾರಣ ನಿವಾಸಿಗಳು ಪರದಾಟ ನಡೆಸಿದ್ದಾರೆ.

ಯಾದಗಿರಿ, ಅಕ್ಟೋಬರ್​ 27: ಜಿಲ್ಲೆಯ ಶಹಾಪುರ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗಿದ್ದು (Rain), ಜನ ಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯಿಂದ ಸಗರ ಗ್ರಾಮದಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ನಿವಾಸಿಗಳು ಪರದಾಟ ನಡೆಸಿದ್ದಾರೆ. ರಸ್ತೆಯಲ್ಲೇ ಹಳ್ಳದ ರೀತಿ ನೀರು ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕೆಲ ಮನೆಗಳು ಮತ್ತು ಅಂಗಡಿಗೂ ಕೊಳಚೆ ನೀರು ಪ್ರವೇಶಿಸಿ ತೊಂದರೆ ಉಂಟಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.