Duleep Trophy 2024: ಅಮೋಘ ಶತಕ ಸಿಡಿಸಿದ ರೋಹಿತ್ ನೆಚ್ಚಿನ ಆಟಗಾರ

|

Updated on: Sep 14, 2024 | 6:46 PM

Duleep Trophy 2024: ಪ್ರಸ್ತುತ ನಡೆಯುತ್ತಿರುವ ದುಲೀಪ್ ಟ್ರೋಫಿ 2024 ರ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತ ಎ ತಂಡವನ್ನು ಪ್ರತಿನಿಧಿಸುತ್ತಿರುವ ತಿಲಕ್ ವರ್ಮಾ ಅಮೋಘ ಶತಕ ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಭವಿಷ್ಯದ ನಾಯಕ ಎಂದು ಪರಿಗಣಿಸಲ್ಪಟ್ಟ ತಿಲಕ್ ವರ್ಮಾ ಅವರು ಭಾರತ ಡಿ ವಿರುದ್ಧ ನಡೆಯುತ್ತಿರುವ ಈ ಪಂದ್ಯದಲ್ಲಿ ಶತಕ ಬಾರಿಸಿದರು.

ಪ್ರಸ್ತುತ ನಡೆಯುತ್ತಿರುವ ದುಲೀಪ್ ಟ್ರೋಫಿ 2024 ರ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತ ಎ ತಂಡವನ್ನು ಪ್ರತಿನಿಧಿಸುತ್ತಿರುವ ತಿಲಕ್ ವರ್ಮಾ ಅಮೋಘ ಶತಕ ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಭವಿಷ್ಯದ ನಾಯಕ ಎಂದು ಪರಿಗಣಿಸಲ್ಪಟ್ಟ ತಿಲಕ್ ವರ್ಮಾ ಅವರು ಭಾರತ ಡಿ ವಿರುದ್ಧ ನಡೆಯುತ್ತಿರುವ ಈ ಪಂದ್ಯದಲ್ಲಿ ಶತಕ ಬಾರಿಸಿದರು. ಈ ಮೂಲಕ ಪಂದ್ಯದ ಮೂರನೇ ದಿನ ಭಾರತ ಎ ತಂಡ, ಭಾರತ ಡಿ ವಿರುದ್ಧ 500 ರನ್‌ಗಳ ಮುನ್ನಡೆ ಸಾಧಿಸಿದೆ.

177 ಎಸೆತಗಳಲ್ಲಿ ಶತಕ

ಎರಡನೇ ದಿನ ಅಂದರೆ ಸೆಪ್ಟೆಂಬರ್ 13 ರ ಸಂಜೆ, ಮಯಾಂಕ್ ಅಗರ್ವಾಲ್ ಔಟಾದ ನಂತರ, ತಿಲಕ್ ವರ್ಮಾ ಕ್ರೀಸ್‌ನಲ್ಲಿ ಬ್ಯಾಟಿಂಗ್‌ಗೆ ಬಂದರು. ದಿನದಾಟದ ಅಂತ್ಯದ ನಂತರ ಅವರು ಅಜೇಯರಾಗಿ ಮರಳಿದರು. ಮೂರನೇ ದಿನ 177 ಎಸೆತಗಳಲ್ಲಿ ಶತಕ ಪೂರೈಸಿದ ತಿಲಕ್ ಅವರ ಶತಕದ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿಗಳೂ ಸೇರಿದ್ದವು. 2020-21ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಎರಡು ಶತಕಗಳನ್ನು ಬಾರಿಸುವ ಮೂಲಕ ಸಂಚಲನ ಮೂಡಿಸಿದ್ದ ತಿಲಕ್ ವರ್ಮಾ, ಭಾರತ ತಂಡದ ಪರ ಇದುವರೆಗೆ ನಾಲ್ಕು ಏಕದಿನ ಮತ್ತು 16 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಇದೀಗ ಬಹಳ ದಿನಗಳ ನಂತರ ಕ್ರಿಕೆಟ್​ ಅಂಗಳಕ್ಕೆ ಕಾಲಿಟ್ಟಿರುವ ತಿಲಕ್ ವರ್ಮಾ ಅವರು ಕೊನೆಯ ಬಾರಿಗೆ ಐಪಿಎಲ್ 2024 ರಲ್ಲಿ ಕಾಣಿಸಿಕೊಂಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಈ ಎಡಗೈ ಬ್ಯಾಟ್ಸ್‌ಮನ್ 33 ಎಸೆತಗಳಲ್ಲಿ 10 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು ತಿಲಕ್‌ಗಿಂತ ಮೊದಲು, ಅದೇ ಇನ್ನಿಂಗ್ಸ್‌ನಲ್ಲಿ ಭಾರತ ಎ ಪರ ಪ್ರಥಮ್ ಸಿಂಗ್ ಕೂಡ ಶತಕ ಗಳಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on