ವಿನಯ್ ನಟನೆಯ ‘ಪೆಪೆ’ ಸಿನಿಮಾಕ್ಕಾಗಿ ಹರಕೆ ಹೊತ್ತ ನಟ ದುನಿಯಾ ವಿಜಯ್

|

Updated on: Aug 24, 2024 | 8:58 PM

ವಿನಯ್ ರಾಜ್​ಕುಮಾರ್ ನಟನೆಯ ‘ಪೆಪೆ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ದುನಿಯಾ ವಿಜಯ್, ‘ಪೆಪೆ’ ಸಿನಿಮಾಕ್ಕೆ ಬೆಂಬಲ ನೀಡಿದ್ದಾರೆ. ದುನಿಯಾ ವಿಜಯ್ ಹಾಗೂ ವಿನಯ್ ರಾಜ್​ಕುಮಾರ್ ಇಬ್ಬರೂ ಒಟ್ಟಿಗೆ ಚೌಡೇಶ್ವರಿ ತಾಯಿ ದರ್ಶನ ಮಾಡಿದ್ದಾರೆ.

ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ ನಿರೀಕ್ಷೆಗಿಂತಲೂ ದೊಡ್ಡ ಯಶಸ್ಸು ಪಡೆದುಕೊಂಡಿದೆ. ಸಿನಿಮಾದ ಪ್ರಚಾರದ ಸಮಯದಲ್ಲಿ ನಟ ದುನಿಯಾ ವಿಜಯ್ ಹಲವು ದೇವಾಲಯಗಳಿಗೆ ತೆರಳಿ ದರ್ಶನ ಪಡೆದಿದ್ದರು. ಕೆಲ ದೇವಾಲಯಗಳಿಗೆ ಪಾದಯಾತ್ರೆ ಸಹ ಮಾಡಿದ್ದರು. ಇದೀಗ ದೊಡ್ಮನೆ ಕುಟುಂಬದ ವಿನಯ್ ರಾಜ್​ಕುಮಾರ್ ನಟನೆಯ ‘ಪೆಪೆ’ ಸಿನಿಮಾ ಬಿಡುಗಡೆ ಆಗಲಿದ್ದು, ಇದೀಗ ದುನಿಯಾ ವಿಜಯ್, ‘ಪೆಪೆ’ ಸಿನಿಮಾಕ್ಕೆ ಬೆಂಬಲ ನೀಡಿದ್ದು, ವಿನಯ್ ರಾಜ್​ಕುಮಾರ್ ಅವರನ್ನು ಜೊತೆಯಾಗಿ ಚೌಡೇಶ್ವರಿ ದೇವಾಲಯಕ್ಕೆ ಕರೆದೊಯ್ದಿದ್ದಾರೆ. ಸಿನಿಮಾ ಗೆಲ್ಲಲೆಂದು ದೇವರ ಮುಂದೆ ಪ್ರಾರ್ಥಿಸಿದ್ದಾರೆ. ದೇವಾಲಯಕ್ಕೆ ತೆರಳುವ ವೇಳೆ ಸಿನಿಮಾ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿನಯ್ ಹಾಗೂ ದುನಿಯಾ ವಿಜಯ್ ಮಾತನಾಡಿದ್ದಾರೆ. ‘ಪೆಪೆ’ ಸಿನಿಮಾ ಆಗಸ್ಟ್ 30 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಸಖತ್ ವೈರಲ್ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ