‘ಸಿಟಿ ಲೈಟ್ಸ್​’ ಸಿನಿಮಾದ ಕಥೆ ಬಗ್ಗೆ ಸುಳಿವು ನೀಡಿದ ದುನಿಯಾ ವಿಜಯ್

Updated on: Feb 10, 2025 | 8:19 PM

ದುನಿಯಾ ವಿಜಯ್ ಅವರು ‘ಸಿಟಿ ಲೈಟ್ಸ್​’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಇಂದು (ಫೆಬ್ರವರಿ 10) ನಡೆದಿದೆ. ಈ ವೇಳೆ ವಿಜಯ್ ಅವರು ಸಿನಿಮಾ ತಂಡವನ್ನು ಪರಿಚಯಿಸಿಕೊಟ್ಟರು ಹಾಗೂ ಕಥೆ ಬಗ್ಗೆ ಕೂಡ ಮಾಹಿತಿ ನೀಡಿದರು. ಈ ಸಿನಿಮಾಗೆ ದುನಿಯಾ ವಿಜಯ್ ಅವರ 2ನೇ ಮಗಳು ಮೋನಿಷಾ ನಾಯಕಿ ಆಗಿದ್ದಾರೆ.

‘ಸಿಟಿಲೈಟ್’ ಸಿನಿಮಾದಲ್ಲಿ ಅನೇಕ ಹೊಸಬರಿಗೆ ದುನಿಯಾ ವಿಜಯ್ ಅವಕಾಶ ನೀಡುತ್ತಿದ್ದಾರೆ. ಮಗಳು ಮೋನಿಷಾ ನಾಯಕಿ ಆಗಿರುವ ಈ ಚಿತ್ರದ ಕತೆ ಏನು ಎಂಬುದನ್ನು ದುನಿಯಾ ವಿಜಯ್ ಹೇಳಿದ್ದಾರೆ. ‘ಇದು ಹೊಸ ವಿಷಯ. ಎಮೋಷನಲ್ ಆಗಿದೆ. ಅಳಿವಿನ ಅಂಚಿನಲ್ಲಿ ಇರುವ ಸಮುದಾಯದ ವಿಷಯ ಇದರಲ್ಲಿ ಇದೆ. ಆ ಸಮುದಾಯದಲ್ಲಿ ವಿದ್ಯಾವಂತರು ಕಡಿಮೆ ಇದ್ದಾರೆ. ಆ ಬಗ್ಗೆ ನನಗೆ ಬೇಸರ ಇದೆ. ಅಂಥ ಸಮುದಾಯದ ವಿಷಯವನ್ನು ಎತ್ತಿಹಿಡಿಯುವ ಪ್ರಯತ್ನ ಇದು’ ಎಂದು ದುನಿಯಾ ವಿಜಯ್ ಹೇಳಿದ್ದಾರೆ. ಈ ಚಿತ್ರಕ್ಕೆ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More