ನನ್ನ ಅತ್ತೆ ಮಕ್ಕಳು ಜೀತಕ್ಕೆ ಇದ್ದರು: ಭಾವುಕವಾಗಿ ಮಾತನಾಡಿದ ದುನಿಯಾ ವಿಜಯ್
ದುನಿಯಾ ವಿಜಯ್ ಅಭಿನಯದ ‘ಲ್ಯಾಂಡ್ಲಾರ್ಡ್’ ಸಿನಿಮಾ ಹಿಟ್ ಆಗಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ಅವರು ಶೋಷಿತ ವರ್ಗದ ಕೊಡಲಿ ರಾಚಯ್ಯ ಎಂಬ ಪಾತ್ರ ಮಾಡಿದ್ದಾರೆ. ಈ ಕುರಿತು ಅವರು ಟಿವಿ9 ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..
ದುನಿಯಾ ವಿಜಯ್ ಅಭಿನಯದ ‘ಲ್ಯಾಂಡ್ಲಾರ್ಡ್’ (Landlord) ಸಿನಿಮಾ ಹಿಟ್ ಆಗಿದೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ಅವರು ಶೋಷಿತ ವರ್ಗದ ಕೊಡಲಿ ರಾಚಯ್ಯ ಎಂಬ ವ್ಯಕ್ತಿಯ ಪಾತ್ರ ಮಾಡಿದ್ದಾರೆ. ಈ ಕುರಿತು ಅವರು ಟಿವಿ9 ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಪಾತ್ರ ಅಷ್ಟು ಸಹಜವಾಗಿ ಮೂಡಿಬರಲು ಕಾರಣ ಆದ ಅಂಶಗಳು ಏನು ಎಂಬುದನ್ನು ಅವರು ವಿವರಿಸಿದ್ದಾರೆ. ‘ಊರಿನಲ್ಲಿ ನನ್ನ ಅತ್ತೆ ಮಕ್ಕಳು ಜೀತಕ್ಕೆ ಇದ್ದರು. ಅದನ್ನು ನಾನು ನೋಡಿದ್ದೇನೆ. ನಮ್ಮ ಊರಿನಲ್ಲಿ ನಾನು ಆ ಶೋಷಣೆ ನೋಡಿದ್ದೇನೆ. ನಮ್ಮ ದೊಡ್ಡಪ್ಪ, ಚಿಕ್ಕಪ್ಪ ಎಲ್ಲರೂ ಬಡತನದಲ್ಲಿ ಇದ್ದರು. ನನ್ನ ತಂದೆ ಒಬ್ಬರೇ ಓದಿದ್ದರು. ಅವರು ಕಷ್ಟಪಟ್ಟಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಚಿಕ್ಕ ವಯಸ್ಸಿನಿಂದಲೂ ನಾನು ಶೋಷಣೆಗೆ ವಿರುದ್ಧವಾಗಿ ಇದ್ದವನು. ಆ ಕೆಟ್ಟ ಸಂಪ್ರದಾಯದಲ್ಲಿ ನಮ್ಮ ಮನೆಯವರೂ ಬದುಕಿದ್ದಾರೆ. ಅದನ್ನೆಲ್ಲ ನೆನಪಿಸಿಕೊಂಡರೆ ಮೈ ಜುಂ ಎನಿಸುತ್ತದೆ. ನಾನು ಅದನ್ನೆಲ್ಲ ಜೀವಿಸಿದ್ದರಿಂದ ಈ ಪಾತ್ರವನ್ನು ಮಾಡಲು ಸುಲಭ ಆಯ್ತು’ ಎಂದು ದುನಿಯಾ ವಿಜಯ್ (Duniya Vijay) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
