ಕನ್ನಡ ಚಿತ್ರರಂಗದಲ್ಲಿರುವ ಮುಖ್ಯ ಸಮಸ್ಯೆ ಏನು? ಬೊಟ್ಟು ಮಾಡಿ ತೋರಿದ ದುನಿಯಾ ವಿಜಯ್

ಕನ್ನಡ ಚಿತ್ರರಂಗದಲ್ಲಿರುವ ಮುಖ್ಯ ಸಮಸ್ಯೆ ಏನು? ಬೊಟ್ಟು ಮಾಡಿ ತೋರಿದ ದುನಿಯಾ ವಿಜಯ್

ಮಂಜುನಾಥ ಸಿ.
|

Updated on: Jul 30, 2024 | 11:17 PM

ದುನಿಯಾ ವಿಜಯ್ ನಿರ್ದೇಶಿಸಿರುವ ಎರಡನೇ ಸಿನಿಮಾ ‘ಭೀಮ’ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಈ ನಡುವೆ ಟಿವಿ9 ಜೊತೆಗೆ ಮಾತನಾಡಿರುವ ನಟ ದುನಿಯಾ ವಿಜಯ್, ಕನ್ನಡ ಚಿತ್ರರಂಗದಲ್ಲಿರುವ ಮುಖ್ಯ ಸಮಸ್ಯೆ ಕಡೆಗೆ ಬೆಟ್ಟು ಮಾಡಿ ತೋರಿಸಿದ್ದಾರೆ.

ನಟ ದುನಿಯಾ ವಿಜಯ್, ನಿರ್ದೇಶಕ ಆಗಿ ಕೆಲ ವರ್ಷಗಳಾಗಿವೆ. ಈಗ ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಮೊದಲ ಸಿನಿಮಾ ‘ಸಲಗ’ ಮೂಲಕ ಗಮನ ಸೆಳೆದಿದ್ದ ದುನಿಯಾ ವಿಜಯ್, ಈ ಬಾರಿ ‘ಭೀಮ’ ಹೆಸರಿನ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದು, ಬೆಂಗಳೂರಿನ ಗಲ್ಲಿಗಳ ನೈಜತೆಯನ್ನು ಸಿನಿಮಾದಲ್ಲಿ ತೋರಿಸಿದಂತೆ ಕಾಣುತ್ತಿದೆ. ಸಿನಿಮಾ ಬಿಡುಗಡೆಗೆ ಮುನ್ನ ಟಿವಿ9ಗೆ ಸಂದರ್ಶನ ಕೊಟ್ಟಿರುವ ನಟ ದುನಿಯಾ ವಿಜಯ್, ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುತ್ತಾ, ನಮ್ಮ ಚಿತ್ರರಂಗದಲ್ಲಿರುವ ಪ್ರಮುಖ ಸಮಸ್ಯೆಯ ಕಡೆಗೆ ಬೊಟ್ಟು ಮಾಡಿ ತೋರಿಸಿದ್ದಾರೆ. ಮತ್ತು ಆದಷ್ಟು ಬೇಗ ಅದನ್ನು ಸುಧಾರಿಸಿಕೊಳ್ಳಬೇಕು ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ