ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್

ದುನಿಯಾ ವಿಜಯ್ ‘ಭೀಮ’ ಸಿನಿಮಾ ಮೂಲಕ ಹಿಟ್ ಸಿನಿಮಾ ಕೊಟ್ಟಿದ್ದಾರೆ. ಇದೀಗ ಇತರೆ ನಟರುಗಳ ಸಿನಿಮಾಗಳಿಗೆ ಬೆಂಬಲ ನೀಡುತ್ತಿದ್ದಾರೆ. ಮಯೂರ್ ಪಟೇಲ್ ಕಮ್​ಬ್ಯಾಕ್ ಸಿನಿಮಾಕ್ಕೆ ಬೆಂಬಲ ನೀಡಿದ ದುನಿಯಾ ವಿಜಿ, ಮಯೂರ್ ಅವರ ವಿನಯತೆಯನ್ನು ಕೊಂಡಾಡಿದರು.

ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
|

Updated on: Sep 19, 2024 | 10:23 PM

ದುನಿಯಾ ವಿಜಯ್ ಇತ್ತೀಚೆಗೆ ‘ಭೀಮ’ ಸಿನಿಮಾ ಮೂಲಕ ಹಿಟ್ ಸಿನಿಮಾ ನೀಡಿದ್ದಾರೆ. ‘ಭೀಮ’ ಯಶಸ್ಸಿನ ಬಳಿಕ ತುಸು ಬಿಡುವಾಗಿರುವ ನಟ, ನಿರ್ದೇಶಕ ದುನಿಯಾ ವಿಜಿ, ಇತರರ ಸಿನಿಮಾಗಳಿಗೆ ಬೆಂಬಲ ನೀಡುವ ಕಾರ್ಯ ಮಾಡುತ್ತಿದ್ದಾರೆ. ಕೆಲ ದಿನದ ಹಿಂದೆ ದಿಗಂತ್ ನಟನೆಯ ‘ಪೌಡರ್’ ಸಿನಿಮಾದ ಪ್ರೀ ರಿಲೀಸ್​ನಲ್ಲಿ ಭಾಗಿಯಾಗಿ ಶುಭ ಕೋರಿದ್ದರು. ಇದೀಗ ಮಯೂರ್ ಪಟೇಲ್​ರ ಹೊಸ ಸಿನಿಮಾಕ್ಕೆ ಶುಭ ಕೋರಿದ್ದು ಮಾತ್ರವಲ್ಲದೆ ಮಯೂರ್ ಅವರನ್ನು ಬಹುವಾಗಿ ಕೊಂಡಾಡಿದರು. ಮಯೂರ್ ಪಟೇಲ್ ವಿನಯವಂತ ವ್ಯಕ್ತಿ, ಅವರು ಮೊದಲು ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ. ಆಗಲೂ ಸಹ ಬಹಳ ವಿನಯದಿಂದ ನಡೆದುಕೊಳ್ಳುತ್ತಿದ್ದರು. ಅದೇ ವಿನಯತೆ, ಮಾನವೀಯತೆ ಉಳಿಸಿಕೊಂಡಿದ್ದಾರೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us