ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆಯೇ ಆಸ್ಪತ್ರೆಗೆ ಬಂದ ಯುವಕ; ಮುಂದೆನಾಯ್ತು?
ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಶೇಂಗಾ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಯುವಕನೊಬ್ಬನಿಗೆ ಹಾವೊಂದು ಕಚ್ಚಿದ್ದು, ಯುವಕ ಚಿಕಿತ್ಸೆಗೆಂದು ಹಾವಿನೊಂದಿಗೆ ಕಿಮ್ಸ್ ಆಸ್ಪತ್ರೆಗೆ ಬಂದ ಘಟನೆ ನಡೆದಿದೆ. ಗ್ರಾಮದ ಈರಪ್ಪ ಮತ್ತು ಆತನ ಮಗ ಫಕ್ಕೀರಪ್ಪ ತಮ್ಮ ಹೊಲದಲ್ಲಿ ಶೆಂಗಾ ಕೀಳಲು ಹೋಗಿದ್ದರು. ಈ ವೇಳೆ ಫಕ್ಕೀರಪ್ಪನಿಗೆ ಹಾವು ಕಡಿದಿದೆ.
ಹುಬ್ಬಳ್ಳಿ, ಸೆ.19: ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಶೇಂಗಾ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಯುವಕನೊಬ್ಬನಿಗೆ ಹಾವೊಂದು ಕಚ್ಚಿದ್ದು, ಯುವಕ ಚಿಕಿತ್ಸೆಗೆಂದು ಹಾವಿನೊಂದಿಗೆ ಕಿಮ್ಸ್ ಆಸ್ಪತ್ರೆಗೆ ಬಂದ ಘಟನೆ ನಡೆದಿದೆ. ಗ್ರಾಮದ ಈರಪ್ಪ ಮತ್ತು ಆತನ ಮಗ ಫಕ್ಕೀರಪ್ಪ ತಮ್ಮ ಹೊಲದಲ್ಲಿ ಶೆಂಗಾ ಕೀಳಲು ಹೋಗಿದ್ದರು. ಈ ವೇಳೆ ಫಕ್ಕೀರಪ್ಪನಿಗೆ ಹಾವು ಕಡಿದಿದೆ. ಹಾವು ಕಚ್ಚಿದ ಕೂಡಲೇ ಹಾವಿನ ತಲೆ ಚಚ್ಚಿ ಕೊಂದು, ಅದೇ ಹಾವನ್ನು ಹಿಡಿದು ಕಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ವೈದ್ಯರಿಗೆ ಹಾವನ್ನ ತೋರಿಸಿ ಇದೆ ಹಾವು ಕಚ್ಚಿದೆ ಚಿಕಿತ್ಸೆ ನೀಡಿ ಎಂದಿದ್ದಾರೆ. ಹಾವು ಕಂಡ ವೈದ್ಯರು ಫಕೀರಪ್ಪನನ್ನು ಸಮಾಧಾನ ಮಾಡಿ ಚಿಕಿತ್ಸೆ ಆರಂಭಿಸಿದ್ದಾರೆ. ಸಧ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಫಕೀರಪ್ಪನಿಗೆ ಚಿಕಿತ್ಸೆ ಮುಂದುವರೆದಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:46 pm, Thu, 19 September 24