ವಿಮಾನ ಟೇಕ್ ಆಫ್ ಆಗುವಾಗ ರನ್‌ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ; ವಿಡಿಯೋ ವೈರಲ್
ವಿಮಾನ ಇನ್ನೇನು ಟೇಕ್ ಆಫ್ ಆಗುತ್ತಿದೆ ಎನ್ನುವಾಗ ರನ್‌ವೇಯಲ್ಲಿ ಚಿರತೆಯೊಂದು ತನ್ನ ಮರಿಗಳೊಂದಿಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿತು. ಇದರ ವೀಡಿಯೋ ವೈರಲ್ ಆಗಿದೆ.
ಮಧ್ಯಪ್ರದೇಶದ ಸಿಯೋನಿ ರನ್‌ವೇಯಲ್ಲಿ ಪೈಲಟ್‌ಗಳಿಗೆ ತರಬೇತಿ ನೀಡಲಾಗುತ್ತಿತ್ತು. ಒಂದು ವಿಮಾನ ಬಂದು ನಿಂತಿತ್ತು ಮತ್ತು ಇನ್ನೊಂದು ವಿಮಾನ ಟೇಕ್ ಆಫ್ ಮಾಡಲು ರನ್‌ವೇಯಲ್ಲಿ ಓಡಲು ಪ್ರಾರಂಭಿಸಿತು. ಅಷ್ಟರಲ್ಲಿ ಚಿರತೆಯೊಂದು ತನ್ನ ಎರಡು ಮರಿಗಳೊಂದಿಗೆ ವಿಮಾನದ ರನ್‌ವೇಯಲ್ಲಿ ಎದುರಿಗೆ ಬಂದಿತು. ಪೈಲಟ್ ಕೂಡಲೇ ವಿಮಾನದ ವೇಗವನ್ನು ಕಡಿಮೆ ಮಾಡಿ ಈ ಚಿರತೆಯ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:09 pm, Thu, 19 September 24