IND vs BAN: ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
R ashwin: ಶಕೀಬ್ ಅಲ್ ಹಸನ್ ಎಸೆದ 53ನೇ ಓವರ್‌ನ ಮೂರನೇ ಎಸೆತವನ್ನು ಅಶ್ವಿನ್, ಸ್ಲಾಗ್ ಸ್ವೀಪ್ ಮಾಡಿ ಮಿಡ್-ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು. ಅಶ್ವಿನ್ ಸಿಡಿಸಿದ ಈ ಸಿಕ್ಸರ್ ನೋಡಿದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಅಜ್ಜಿ ತನ್ನ ಸೀಟಿನಿಂದ ಎದ್ದು ಚಪ್ಪಾಳೆ ತಟ್ಟಿದರು.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಸ್ಮರಣೀಯ ಇನ್ನಿಂಗ್ಸ್ ಕಟ್ಟಿದ ಅಶ್ವಿನ್ ಅಜೇಯ ಶತಕ ಸಿಡಿಸಿ ಮಿಂಚಿದ್ದಾರೆ. 144 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡು ತಂಡ ಸಂಕಷ್ಟದಲ್ಲಿದ್ದಾಗ ಜಡೇಜಾ ಜೊತೆಯಾದ ಅಶ್ವಿನ್ ತಮ್ಮ ವೃತ್ತಿಜೀವನದ 101 ನೇ ಟೆಸ್ಟ್ ಪಂದ್ಯದಲ್ಲಿ 102 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್‌ನಲ್ಲಿ ಹತ್ತು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು. ಈ ವೇಳೆ ಅಶ್ವಿನ್ ಸಿಡಿಸಿದ ಸಿಕ್ಸರ್ ನೋಡಿ ಕ್ರೀಡಾಂಗಣದಲ್ಲಿದ್ದ ಅಜ್ಜಿಯೊಬ್ಬರು ಕುರ್ಚಿಯಿಂದ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಶಕೀಬ್ ಎಸೆತದಲ್ಲಿ ಅಶ್ವಿನ್ ಸಿಕ್ಸರ್
ಬೃಹತ್ ಜೊತೆಯಾಟದ ಮೂಲಕ ತಲೆನೋವಾಗಿ ಪರಿಣಮಿಸಿದ್ದ ಅಶ್ವಿನ್ ಹಾಗೂ ಜಡೇಜಾ ಜೋಡಿಯನ್ನು ಬೇರ್ಪಡಿಸುವ ಕೆಲಸವನ್ನು ಬಾಂಗ್ಲಾದೇಶದ ನಾಯಕ ನಜ್ಮಲ್ ಹಸನ್ ಶಾಂಟೊ, ಅನುಭವಿ ಶಕೀಬ್ ಅಲ್ ಹಸನ್ಗೆ ನೀಡಿದರು. ಇನ್ನಿಂಗ್ಸ್ನ 53ನೇ ಓವರ್ ಬೌಲ್ ಮಾಡಲು ಬಂದ ಶಕೀಬ್ ಅವರ ಅವರ ಓವರ್‌ನ ಮೊದಲ ಎಸೆತದಲ್ಲಿ ಜಡೇಜಾ ಬೌಂಡರಿ ಬಾರಿಸಿದರು. ಮುಂದಿನ ಎಸೆತದಲ್ಲಿ ಸಿಂಗಲ್ ಪಡೆದರು. ಇದಾದ ಬಳಿಕ ಅಶ್ವಿನ್ ಮೂರನೇ ಎಸೆತವನ್ನು ಸ್ಲಾಗ್ ಸ್ವೀಪ್ ಮಾಡಿ ಮಿಡ್-ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು. ಅಶ್ವಿನ್ ಸಿಡಿಸಿದ ಈ ಸಿಕ್ಸರ್ ನೋಡಿದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಅಜ್ಜಿ ತನ್ನ ಸೀಟಿನಿಂದ ಎದ್ದು ಚಪ್ಪಾಳೆ ತಟ್ಟಿದರು.
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ

