AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಮಶೇಖರ್ ಮತ್ತು ಹೆಬ್ಬಾರ್​ರನ್ನು ರಕ್ಷಿಸುವಲ್ಲಿ ತಂದೆ ಮಗನ ಜೋಡಿ ವಿಫಲವಾಗಿದೆ: ಬಸನಗೌಡ ಯತ್ನಾಳ್

ಸೋಮಶೇಖರ್ ಮತ್ತು ಹೆಬ್ಬಾರ್​ರನ್ನು ರಕ್ಷಿಸುವಲ್ಲಿ ತಂದೆ ಮಗನ ಜೋಡಿ ವಿಫಲವಾಗಿದೆ: ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: May 27, 2025 | 5:57 PM

Share

ರಾಜ್ಯ ಬಿಜೆಪಿ ನಾಯಕರಿಂದ ಭ್ರಷ್ಟ ಕಾಂಗ್ರೆಸ್ ಮಂತ್ರಿಗಳನ್ನು ಎಕ್ಸ್​ಪೋಸ್ ಮಾಡಲು ಸಾಧ್ಯವಾಗಿಲ್ಲ, ಸದನದಲ್ಲಿ ಭ್ರಷ್ಟಾಚಾರದ ವಿರುದ್ಧ ಮಾತಾಡಲ್ಲ, ಹಿಂದೂಗಳ ರಕ್ಷಣೆ ಮಾಡೋದು ಇವರಿಗೆ ಸಾಧ್ಯವಾಗುತ್ತಿಲ್ಲ, ವಿಜಯೇಂದ್ರ ರಾಜ್ಯಾಧ್ಯಕ್ಷನಾಗಿ ಮುಂದುವರಿದರೆ 224 ಸೀಟುಗಳ ಪೈಕಿ ಬಿಜೆಪಿಗೆ 245 ಸೀಟು ಬರಬಹುದು ಅಂತ ರಾಜ್ಯ ಉಸ್ತುವಾರಿ ರಾಧ ಮೋಹನ್​ದಾಸ್ ಅಗರ್ವಾಲ್ ಮುಂದೆ ಹೇಳಿದರೂ ಅಚ್ಚರಿಯಿಲ್ಲ ಎಂದು ಯತ್ನಾಳ್ ಹೇಳಿದರು.

ವಿಜಯಪುರ, ಮೇ 27: ಬಿಜೆಪಿ ಶಾಸಕರಾದ ಎಸ್ ಟಿ ಸೋಮಶೇಖರ್ (ST Somashekhar) ಮತ್ತು ಶಿವರಾಂ ಹೆಬ್ಬಾರ್ (Shivaram Hebbar) ಅವರನ್ನು ಪಕ್ಷದಿಂದ 6 ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ವಿಜಯಪುರದ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅವರಿಬ್ಬರ ರಕ್ಷಣೆಗಾಗಿ ವಿಜಯೇಂದ್ರ ಮತ್ತು ಯಡಿಯೂರಪ್ಪ ಬಹಳ ಪ್ರಯತ್ನ ಮಾಡಿದರು, ಪಕ್ಷದಿಂದ ಯಾರಾದರೂ ಹೊರಗೆ ಹೋಗೋದಾದರೆ ಅದು ಯತ್ನಾಳ್ ಮಾತ್ರ ನಿಮಗೇನೂ ಆಗಲ್ಲ ಅಂತ ಭರವಸೆ ನೀಡಿದ್ದರು, ಆದರೆ ಅವರನ್ನು ಉಳಿಸಿಕೊಳ್ಳುವಲ್ಲಿ ತಂದೆ-ಮಗ ವಿಫಲರಾದರು ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷನ ಚುನಾವಣೆ ಬಗ್ಗೆ ಮಾತಾಡಿದ ಯತ್ನಾಳ್, ಪಾಕಿಸ್ತಾನದ ಮೇಲೆ ನಡೆದ ಯುದ್ಧದ ಕಾರಣ ಮುಂದೂಡಿರಬಹುದು, ಇಷ್ಟರಲ್ಲೇ ಆಗಬಹುದು ಎಂದು ಹೇಳಿದರು.

ಇದನ್ನೂ ಓದಿ:  ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವ ಕಾಂಗ್ರೆಸ್​ನಲ್ಲಿ ಯತ್ನಾಳ್​ರನ್ನು ಸೇರಿಸಿಕೊಳ್ಳೋದು ದುಸ್ಸಾಧ್ಯ: ಎಂಬಿ ಪಾಟೀಲ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ