ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವ ಕಾಂಗ್ರೆಸ್ನಲ್ಲಿ ಯತ್ನಾಳ್ರನ್ನು ಸೇರಿಸಿಕೊಳ್ಳೋದು ದುಸ್ಸಾಧ್ಯ: ಎಂಬಿ ಪಾಟೀಲ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರೊಬ್ಬರು ಕನ್ನಡದಲ್ಲಿ ಮಾತಾಡದ ಕಾರಣ ಅವರನ್ನು ಟ್ರಾನ್ಸಫರ್ ಮಾಡಿರುವುದಕ್ಕೆ ಬೆಂಗಳೂರಿನಲ್ಲಿದ್ದ ಸಾಫ್ಟ್ ವೇರ್ ಕಂಪನಿಯೊಂದು ಪುಣೆಗೆ ಶಿಫ್ಟ್ ಆಗುತ್ತಿರುವ ಸುದ್ದಿಯನ್ನು ಅಲ್ಲಗಳೆದ ಪಾಟೀಲ್, ಬೆಂಗಳೂರು ಐಟಿ ವಲಯ ಮತ್ತು ಸ್ಟಾರ್ಟರ್ಪ್ ಗಳ ಕ್ಯಾಪಿಟಲ್ ಆಗಿದೆ, ಯಾವುದಾದರೂ ಕಂಪನಿಗೆ ಅಪಾರ್ಥವಾಗಿದ್ದರೆ ಅದನ್ನು ಸರಿಪಡಿಸಲಾಗುವುದು ಎಂದರು.
ಬೆಂಗಳೂರು, ಮೇ 26: ಬಿಜೆಪಿಯಿಂದ ಉಚ್ಚಾಟಿತರಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ತಮ್ಮ ಸ್ವಾಭಿಮಾನ ಬಿಟ್ಟುಕೊಟ್ಟು ಬಿಜೆಪಿಗೆ ವಾಪಸ್ಸು ಹೊಗುವ ಬದಲು ಹೊಸ ಪಕ್ಷವನ್ನು ಕಟ್ಟಬೇಕು ಎಂದು ಸಚಿವ ಎಂಬಿ ಪಾಟೀಲ್ ಸಲಹೆ ನೀಡಿದರು. ನಗರದಲ್ಲಿ ಮಾಧ್ಯಮದವರೊಡನೆ ಮಾತಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿಗೆ ನಾಯಕತ್ವವೇ ಇಲ್ಲ, ಇರೋ ಲೀಡರ್ಗಳೆಲ್ಲ ತಮ್ಮ ತಮ್ಮ ಗುಂಪುಗಳನ್ನು ಮಾಡಿಕೊಂಡಿದ್ದಾರೆ, ಬಸನಗೌಡ ಯತ್ನಾಳ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳೋದು ದುಸ್ಸಾಧ್ಯ, ಯಾಕೆಂದರೆ ಅವರು ಒಂದು ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತಾಡುತ್ತಿರುತ್ತಾರೆ, ಆದರೆ ಕಾಂಗ್ರೆಸ್ ಎಲ್ಲ ಧರ್ಮ, ಜಾತಿ ಮತ್ತು ವರ್ಗಗಳನ್ನು ಸಮಾನವಾಗಿ ನೋಡುವ ಪಕ್ಷ ಎಂದರು.
ಇದನ್ನೂ ಓದಿ: ಬಸನಗೌಡ ಯತ್ನಾಳ್ ವಿರುದ್ಧ ಶಿವಾನಂದ ಪಾಟೀಲ್ ಸಮರ ಸಾರಿದ್ದು ಎಂಬಿ ಪಾಟೀಲ್ ಗೆ ಇಷ್ಟವಾಗುತ್ತಿಲ್ಲವೇ?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

