Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್

ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್

ಸುಷ್ಮಾ ಚಕ್ರೆ
|

Updated on: Oct 09, 2024 | 8:41 PM

ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ದುರ್ಗಾ ಪೂಜೆಯ ಹಬ್ಬಗಳು ಅಕ್ಟೋಬರ್ 9ರಂದು ಪ್ರಾರಂಭವಾಗಿವೆ. ಭಾರತದ ಹಲವಾರು ಭಾಗಗಳಲ್ಲಿ ಈಗಾಗಲೇ ಅತ್ಯಾಕರ್ಷಕ ಪೆಂಡಾಲ್‌ಗಳು ಸಿದ್ಧವಾಗಿವೆ. ಪಶ್ಚಿಮ ಬಂಗಾಳದ ಕೊಲ್ಕತ್ತಾವು ದುರ್ಗಾ ದೇವಿಯನ್ನು ಆಚರಿಸುವ ಹಿಂದೂ ಹಬ್ಬದ ಕೇಂದ್ರಬಿಂದುವಾಗಿದೆ. ಇಲ್ಲಿನ ಸಾಲ್ಟ್ ಲೇಕ್ ಎಕೆ ಬ್ಲಾಕ್‌ನಲ್ಲಿ ವಿಶಿಷ್ಟವಾದ ಮಳೆಹನಿ ಥೀಮ್​ನ ಪೆಂಡಾಲ್ ಹಾಕಲಾಗಿದ್ದು, ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆ ಗಳಿಸುತ್ತಿದೆ.

ಕೋಲ್ಕತ್ತಾ: ಬಂಗಾಳದ ಕೊಲ್ಕತ್ತಾದ ದುರ್ಗಾ ಪೂಜೆಯ ಮಂಟಪವೊಂದು ಎಲ್ಲರ ಕಣ್ಮನ ಸೆಳೆಯುತ್ತಿದೆ. ಸಾಲ್ಟ್ ಲೇಕ್ ಎಕೆ ಬ್ಲಾಕ್‌ನಲ್ಲಿರುವ ಪೆಂಡಾಲ್​ನಲ್ಲಿ ‘ಮಳೆನೀರಿನ ಸಂರಕ್ಷಣೆ’ ಅನ್ನು ತನ್ನ ಥೀಮ್‌ ಆಗಿ ಮಾಡಿಕೊಳ್ಳಲಾಗಿದೆ. ಸಾಂಪ್ರದಾಯಿಕ ಧಕ್ ಬೀಟ್‌ಗಳೊಂದಿಗೆ ಕೃತಕ ಮಳೆಹನಿಗಳನ್ನು ಈ ವೇಳೆ ಪ್ರದರ್ಶಿಸಲಾಯಿತು. ವಿವಿಧ ಪಾತ್ರೆಗಳನ್ನು ಗುಂಡಿಯಲ್ಲಿ ಇಟ್ಟು ಮಳೆಯ ಹನಿಗಳು ಅವುಗಳ ಮೇಲೆ ಬೀಳುವಂತೆ ಮಾಡಿ ನೈಸರ್ಗಿಕ ಮಳೆಯ ಲಯವನ್ನು ಮರುಸೃಷ್ಟಿಸಲಾಯಿತು. ಇದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ