ಕುಮಾರಸ್ವಾಮಿ ಸಿಎಂ ಆಗಿದ್ದಾಗ ಏನೂ ಆಗಿರದ ಡ್ಯಾನಿಷ್ ಅಲಿಗೆ ಒಬ್ಬ ಐಎಎಸ್ ಅಧಿಕಾರಿಯನ್ನು ಲಿಯೇಜನ್ ಆಫೀಸರ್ ಅಗಿ ನೀಡಿದ್ದರು: ಸಿದ್ದರಾಮಯ್ಯ

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಏನೂ ಆಗಿರದ ಡ್ಯಾನಿಷ್ ಅಲಿಗೆ ಒಬ್ಬ ಐಎಎಸ್ ಅಧಿಕಾರಿಯನ್ನು ಲಿಯೇಜನ್ ಆಫೀಸರ್ ಅಗಿ ನೀಡಿದ್ದರು: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 21, 2023 | 5:51 PM

2018ರಲ್ಲಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭಕ್ಕೆ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಿದ್ದರು.

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರ ಜೊತೆ ಸೇರಿರುನ ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿಯನ್ನು (HD Kumaraswamy) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿಧಾನ ಪರಿಷತ್ ನಲ್ಲಿ ತರಾಟೆಗೆ ತೆಗೆದುಕೊಂಡರು. 2018ರಲ್ಲಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭಕ್ಕೆ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಿದ್ದರು. ಅವರನ್ನು ಸ್ಟೇಟ್ ಗೆಸ್ಟ್ ಗಳನ್ನಾಗಿ ಮಾಡಿ ಐಎಎಸ್ ಅಧಿಕಾರಿಗಳನ್ನು ಅತಿಥಿಗಳ ಲಿಯೇಜನ್ ಅಧಿಕಾರಿಗಳಾಗಿ ನೀಡಿದ್ದರು. ಹಿಂದೆ ಜೆಡಿಎಸ್ ಪಕ್ಷದ ಪ್ರಧನ ಕಾರ್ಯದರ್ಶಿಯಾಗಿದ್ದ ಡ್ಯಾನಿಷ್ ಅಲಿಗೂ (Danish Ali) ಒಬ್ಬ ಐಎಎಸ್ ಅಧಿಕಾರಿಯನ್ನು ಲಿಯೇಜನ್ ಅಧಿಕಾರಿಯಾಗಿ ನೀಡಿದ್ದರು. ಡ್ಯಾನಿಷ್ ಅಲಿ ಈಗ ಸಂಸದರೇನೋ ಆಗಿರಬೇಕು, ಆದರೆ 2018 ರಲ್ಲಿ ಅವರು ಏನೆಂದರೆ ಏನೂ ಅಗಿರಲಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ಕುಮಾರಸ್ವಾಮಿಯವರನ್ನು ನಾವು ಪ್ರಶ್ನಿಸಿರಲಿಲ್ಲ ಮತ್ತು ಅವರ ಹಾಗೆ ಪ್ರತಿಭಟನೆಯನ್ನೂ ನಡೆಸಲಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ