Lokayukta Raid: ಬಿಜೆಪಿ ಶಾಸಕನ ಮಗ ಅದೆಂಥ ಕಿರಾತಕನೆಂದರೆ ಲೋಕಾಯುಕ್ತ ದಾಳಿ ವೇಳೆ ಕೆಲ ಮಹತ್ವದ ದಾಖಲೆ ಪತ್ರ ನುಂಗಿಬಿಟ್ಟ!

ಅರುಣ್​ ಕುಮಾರ್​ ಬೆಳ್ಳಿ

Updated on: Mar 03, 2023 | 1:06 PM

ಅದು ಬಿಡಿ, ಆಧಿಕಾರಿಗಳು ಕಾಗದ ಮತ್ತು ಅದರಲ್ಲಿದ್ದ ವಿವರಗಳನ್ನು ಬೇರೊಂದು ರೀತಿಯಲ್ಲಿ ಕಕ್ಕಿಸುತ್ತಾರೆ. ಪ್ರಶಾಂತ್ ಮನೆ ಮತ್ತು ಕಚೇರಿಯಿಂದ ರೂ. 8 ಕೋಟಿಗಿಂತ ಜಾಸ್ತಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು: ಗುರುವಾರ ಸಾಯಂಕಾಲ ರೂ. 40 ಲಕ್ಷ ಸ್ವೀಕರಿಸುವಾಗ ಸಿಕ್ಕುಬಿದ್ದ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ (Madal Virupakshappa) ಪುತ್ರ ಪ್ರಶಾಂತ್ ಮಾಡಾಳ್ (Prashant Madal) ಮತ್ತು ಅವರ ಕಚೇರಿಯ ಸಿಬ್ಬಂದಿ ಅದೆಂಥ ಕಿರಾತಕರೆಂದರೆ ಲೋಕಯುಕ್ತ ದಾಳಿ (Lokayukta Raid) ನಡೆಸಿದ ಸಮಯದಲ್ಲಿ ಕೆಲ ದಾಖಲೆಪತ್ರಗಳನ್ನು ನುಂಗಿಬಿಟ್ಟರಂತೆ! ಲೋಕಾಯುಕ್ತ ಅಧಿಕಾರಿಗಳು ಅವುಗಳನ್ನು ಕಕ್ಕಿಸುವ ಪ್ರಯತ್ನ ಮಾಡಿರುವರಾದರೂ ಅದು ಸಾಧ್ಯವಾಗಿಲ್ಲ. ಅದು ಬಿಡಿ, ಆಧಿಕಾರಿಗಳು ಕಾಗದ ಮತ್ತು ಅದರಲ್ಲಿದ್ದ ವಿವರಗಳನ್ನು ಬೇರೊಂದು ರೀತಿಯಲ್ಲಿ ಕಕ್ಕಿಸುತ್ತಾರೆ. ಪ್ರಶಾಂತ್ ಮನೆ ಮತ್ತು ಕಚೇರಿಯಿಂದ ರೂ. 8 ಕೋಟಿಗಿಂತ ಜಾಸ್ತಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 03, 2023 01:05 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.